ವಿಮಾನದಲ್ಲಿ ಸುಂದರ ಯುವತಿ ಪಕ್ಕದಲ್ಲಿ ಕೂರುವ ಕನಸಿಗೆ ಬಿತ್ತು ಕತ್ತರಿ!

ಬುಧವಾರ, 2 ಆಗಸ್ಟ್ 2017 (10:03 IST)
ನವದೆಹಲಿ: ಜಾಹೀರಾತೊಂದರಲ್ಲಿ ಮಹಿಳೆ ಸ್ವಲ್ಪ ಸೀಟ್ ಅಡ್ಜಸ್ಟ್ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಯುವಕ ಮಧ್ಯದ ಸೀಟ್ ಬಿಟ್ಟುಕೊಟ್ಟು ಯುವತಿ ಜತೆ ಕೂರುವ ಕನಸು ಕಾಣುತ್ತಾನೆ. ಇಂತಹದ್ದೊಂದು ಜಾಹೀರಾತಿನ ದೃಶ್ಯ ಇನ್ನು ಈ ಏರ್ ಲೈನ್ಸ್ ನಲ್ಲಿ ಸಿಗದು.


ವಿಸ್ತಾರಾ ವಿಮಾನ ಸಂಸ್ಥೆ ತನ್ನ ವಿಮಾನದಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಮಧ್ಯದ ಸೀಟು ನೀಡದೇ ಇರಲು ತೀರ್ಮಾನಿಸಿದೆ. ಮಹಿಳೆಯರಿಗೆ ಕಿಟಿಕಿ ಪಕ್ಕದ ಅಥವಾ ಇನ್ನೊಂದು ತುದಿಯ ಸೀಟು ಕಾದಿರಿಸಲು ಅವಕಾಶ ನೀಡಲಿದೆ. ಇದರಿಂದ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರು ಅಪರಿಚಿತ ಪುರುಷರೊಂದಿಗೆ ಕೂರುವ ಕಿರಿ ಕಿರಿ ತಪ್ಪಿಸುವುದು ಸಂಸ್ಥೆಯ ಉದ್ದೇಶವಾಗಿದೆ.

ಮಹಿಳಾ ಪ್ರಯಾಣಿಕರ ಬೇಡಿಕೆಯ ಮೇರೆ ಏರ್ ಲೈನ್ಸ್ ಸಂಸ್ಥೆ ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಮಹಿಳೆಯರು ತಮ್ಮ ಬ್ಯಾಗ್ ಪಡೆದುಕೊಳ್ಳಲು ವಿಸ್ತಾರ ಸಿಬ್ಬಂದಿಯ ಸಹಾಯ ಪಡೆದುಕೊಳ್ಳಬಹುದಂತೆ. ಇದು ಮಹಿಳೆಯರ ಹಿತದೃಷ್ಟಿಯಿಂದ ಮಾಡಿರುವ ಯೋಜನೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ..  ಶಾರುಖ್ ಖಾನ್ ರನ್ನು ನೋಡಲು ಬಂದ ಆ ವಿಶೇಷ ‘ಅಭಿಮಾನಿ’!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ