ನವದೆಹಲಿ:ನೋಟು ರದ್ದತಿ ಪರಿಣಾಮ 2016–17ನೇ ಸಾಲಿನಲ್ಲಿ ದೇಶದ ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ತೀವ್ರವಾಗಿ ಕುಸಿದಿದ್ದು, ಶೇ 7.1ಕ್ಕೆ ಇಳಿಕೆ ಕಂಡಿದೆ. ನೋಟು ರದ್ದತಿ ಬಳಿಕ ಕೃಷಿ ವಲಯ ಹೊರತುಪಡಿಸಿ ಉಳಿದೆಲ್ಲಾ ವಲಯಗಳ ಪ್ರಗತಿ ಇಳಿಕೆ ಕಂಡಿದೆ ಎಂದು ಕೇಂದ್ರ ಅಂಕಿ-ಅಂಶ ಕಚೇರಿ ಮಾಹಿತಿ ನೀಡಿದೆ.
ದತ್ತಾಂಶದ ಪ್ರಕಾರ, ಕಳೆದ ತ್ತೈಮಾಸಿಕದಲ್ಲಿದ್ದ ಶೇ.7.0 ಜಿಡಿಪಿ ಜನವರಿ - ಮಾರ್ಚ್ ಅವಧಿಯಲ್ಲಿ ಶೇ. 6.1ಕ್ಕೆ ಕುಸಿದಿದೆ. ಈ ಮೂಲಕ 2016-17ನೇ ವಿತ್ತೀಯ ವರ್ಷದ ಜಿಡಿಪಿ ಶೇ.7.1ಕ್ಕೆ ತಲುಪಿದಂ ತಾಗಿದೆ. ಇದು ಕಳೆದ 3 ವರ್ಷಗಳಲ್ಲೇ ಜಿಡಿಪಿಯಲ್ಲಾದ ಅತ್ಯಧಿಕ ಇಳಿಕೆ. 2015 - 16ರಲ್ಲಿ ಇದು ಶೇ.8 ಮತ್ತು ಅದಕ್ಕಿಂತಲೂ ಮೊದಲ ವರ್ಷದಲ್ಲಿ ಶೇ.7.5 ಆಗಿತ್ತು.
ಮೂಲಸೌಲಭ್ಯಕ್ಕೆ ಪೂರಕವಾದ ಪ್ರಮುಖ 8 ವಲಯಗಳಲ್ಲಿಯೂ ಪ್ರಗತಿ ದರ ಇಳಿಮುಖವಾಗಿದೆ. ಎಪ್ರಿಲ್‌ನಲ್ಲಿ ಇದು ಶೇ. 2.5ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಲ್ಲಿ ದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್‌ವಲಯದ ಪ್ರಗತಿ ದರ ಶೇ. 8.7 ರಷ್ಟಿತ್ತು.