ಶೀಘ್ರದಲ್ಲೇ 11 ಅಂಕಿಯ ಮೊಬೈಲ್ ಸಂಖ್ಯೆ?

ಬುಧವಾರ, 12 ಅಕ್ಟೋಬರ್ 2016 (14:16 IST)
ದೂರವಾಣಿ ನಿರ್ವಾಹಕರುಗಳು ಶೀಘ್ರದಲ್ಲೇ 10 ಅಂಕಿಗಳ ಮೊಬೈಲ್ ಸಂಖ್ಯೆಗಳಿಂದ ಹೊರಬರುವ ನಿರೀಕ್ಷೆ ಇದೆ. 10 ಅಂಕೆಗಳ ಬದಲಾಗಿ 11 ಸಂಖ್ಯೆಗಳ ವ್ಯವಸ್ಥೆಯನ್ನು ಜಾರಿಗೆ ತರಲು ದೂರಸಂಪರ್ಕ ಇಲಾಖೆ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಪ್ರಕಟವಾಗಿರುವ ಆದಷ್ಟು ಬೇಗ ಈ ವ್ಯವಸ್ಥೆ ಜಾರಿಗೆ ಬರಲಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ದೂರಸಂಪರ್ಕ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. 
 
2003 ರಲ್ಲಿ  ಟೆಲಿಕಾಂ ಇಲಾಖೆ 30 ವರ್ಷದ ಸಂಖ್ಯಾ ಯೋಜನೆಯನ್ನು ತಂದಿತ್ತು. ಆದರೆ ಟೆಲಿಕಾಂ ಚಂದಾದಾರರ ಬೆಳೆಯುತ್ತಿರುವ ವೇಗ, ತನ್ನ ಪಾಲಿಸಿಯನ್ನು ಪುನರ್ ಪರಿಶೀಲಿಸಿ 11 ಅಂಕಿಯ ಸಂಖ್ಯಾ ವ್ಯವಸ್ಥೆಯ ಪರಿಗಣಿಸಲು ದೂರಸಂಚಾರ ಇಲಾಖೆಗೆ ಅನಿವಾರ್ಯವನ್ನಾಗಿಸಿತು. 
 
ಪ್ರತಿ ಟೆಲಿಕಾಂ ಆಪರೇಟರ್‌ಗಳಿಗೆ ಅವಶ್ಯಕತೆ ಆಧಾರದ ಮೇಲೆ ಮೊಬೈಲ್ ಸಂಖ್ಯೆಗಳ ಸರಣಿಯನ್ನು ಹಂಚಿಕೆ ಮಾಡಲಾಗುತ್ತದೆ (ಕಂಪನಿ ಹೊಂದಿರುವ ಗ್ರಾಹಕರ ಆಧಾರದ ಮೇಲೆ ಆರು ತಿಂಗಳು ಅಥವಾ ಒಂದು ವರ್ಷ).

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ