ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

Sampriya

ಮಂಗಳವಾರ, 19 ಆಗಸ್ಟ್ 2025 (18:35 IST)
ಬೆಳ್ತಂಗಡಿ: ಧರ್ಮಸ್ಥಳದ ಸುತ್ತಾಮುತ್ತಾ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಸದ್ಯ ಶೋಧ ಕಾರ್ಯಾಚರಣೆಗೆ ತಾತ್ಕಲಿಕ ಬ್ರೇಕ್ ಹಾಕಲಾಗಿದೆ. ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ಸಂಬಂಧ ತಿಳಿಸಿದ್ದರು. 

ಕಾರ್ಯಚರಣೆ ಸ್ಥಗಿತಗೊಂಡಿದ್ದರು ಧರ್ಮಸ್ಥಳದ ವಿವಿಧ ಉತ್ಖನನ ಸ್ಥಳಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಪತ್ತೆಯಾದ ಅಸ್ಥಿಪಂಜರದ ಕುರುಹುಗಳನ್ನು ವಿಶ್ಲೇಷಣೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ.

ಅದರ ವರದಿ ಬಂದ್ಮೇಲೆ ತನಿಖೆ ತೀವ್ರಗೊಳ್ಳಲಿದ್ದು, ಆ ಬಳಿಕ ಮೂರು ಸ್ಥಳಗಳಲ್ಲಿ ಹೊಸದಾಗಿ ಶೋಧ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.

ವಾರಾಂತ್ಯದೊಳಗೆ ಎಫ್‌ಎಸ್‌ಎಲ್ ವರದಿ ಎಸ್‌ಐಟಿಗೆ ಸಿಗುವ ಸಾಧ್ಯತೆಯಿದ್ದು, ಆ ಬಳಿಕ ತನಿಖೆ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. 

ಈ ತನಿಖೆ ಮೂಲಕ ಅಸ್ಥಿಪಂಜರದ ಅವಶೇಷಗಳು ಗಂಡು ಅಥವಾ ಹೆಣ್ಣು, ಅವಶೇಷಗಳ ಅಂದಾಜು ವಯಸ್ಸು ಮತ್ತು ಎಷ್ಟು ವರ್ಷಗಳ ಹಿಂದೆ ಸಾವು ಸಂಭವಿಸಿದೆ. ದೂರುದಾರರು ಶಂಕಿಸಿದಂತೆ ಸಂಗ್ರಹಿಸಿದ ಮಣ್ಣಿನಲ್ಲಿ ಕರಗಿದ ಮಾನವ ಮೂಳೆಗಳ ಕುರುಹುಗಳಿವೆಯೇ ಎಂದು ತಿಳಿದುಬರಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ