ಆಪಲ್ ಐಟ್ಯೂನ್, ಗೂಗಲ್ ಸ್ಟೋರ್‌ನಲ್ಲಿ ನಗ್ನ ಚಿತ್ರಗಳ ಪ್ಲೇಬಾಯ್ ಮ್ಯಾಗ್‌ಜಿನ್ ಲಭ್ಯ
ಶುಕ್ರವಾರ, 14 ಅಕ್ಟೋಬರ್ 2016 (16:32 IST)
ಆಪಲ್ ಐಟ್ಯೂನ್‌ಗಳಲ್ಲಿ ಮತ್ತು ಗೂಗಲ್ ಸ್ಟೋರ್‌ನಲ್ಲಿ ನಗ್ನಚಿತ್ರಗಳಿಗಾಗಿ ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದಿರುವ ಪ್ಲೇಬಾಯ್ ಮ್ಯಾಗ್‌ಜಿನ್ ಉಚಿತವಾಗಿ ಪಡೆಯಬಹುದು ಎಂದು ಪ್ಲೇಬಾಯ್ ಸಂಸ್ಥೆ ಆಫರ್ ನೀಡಿದೆ.
ನಗ್ನತೆಗಾಗಿ ಹೆಸರುವಾಸಿಯಾಗಿರುವ ಪ್ಲೇಬಾಯ್ ಸಂಸ್ಥೆ, ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಐಟ್ಯೂನ್‌ಗಳು ಮತ್ತು ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಬಳಕೆದಾರರಿಗೆ ಉಚಿತವಾಗಿ ಒದಗಿಸಲು ನಿರ್ಧರಿಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಆರಂಭದಲ್ಲಿ ಪ್ಲೇಬಾಯ್ ಮ್ಯಾಗ್‌ಜಿನ್ ಮತ್ತಷ್ಟು ಆಧುನಿಕರಣಗೊಳಿಸಿದ್ದರಿಂದ ವಿತರಣಾ ವ್ಯವಸ್ಥೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪುವ ದೃಷ್ಟಿಯಿಂದ ಅನೇಕ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಇಸ್ರೇಲ್ ತಿಳಿಸಿದ್ದಾರೆ.
ಐಟ್ಯೂನ್‌ಗಳು ಮತ್ತು ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಪ್ಲೇಬಾಯ್ ಸೇರ್ಪಡೆಗೊಳಿಸಿರುವುದು ಹೊಸಮೈಲುಗಲ್ಲಾಗಿದೆ. ಇದರಿಂದ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ