ಇದೀಗ ಮೊಬೈಲ್‌ನಲ್ಲಿ ತ್ವರೀತ ಟಿಕೆಟ್.. ರೈಲ್ವೇ ಇಲಾಖೆಯಿಂದ ಹೊಸ ಆಪ್...!

ಗುರುಮೂರ್ತಿ

ಗುರುವಾರ, 15 ಫೆಬ್ರವರಿ 2018 (13:24 IST)
ದಕ್ಷಿಣ ಪಶ್ಚಿಮ ರೈಲ್ವೆ (SWR) ಇದೀಗ ಹೊಸದೊಂದು ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದ್ದು ಅದರ ಮೂಲಕ ಆನ್‌ಲೈನ್‌ನಲ್ಲಿ ನೀವು ಸುಲಭವಾಗಿ ನಿಮ್ಮ ಪ್ರಯಾಣದ ಟಿಕೆಟ್ ಅನ್ನು ಪಡೆದುಕೊಳ್ಳಬಹುದು. ಇದ್ಯಾವುದಿದು ಹೊಸ ಆಪ್ ಅಂತೀರಾ ಇಲ್ಲಿದೆ ಪೂಲ್ ಡಿಟೇಲ್ಸ್.
ದಕ್ಷಿಣ ಪಶ್ಚಿಮ ರೈಲ್ವೆ ಇದೀಗ 'UTS' ಎಂಬ ಹೊಸದಾದ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದ್ದು, ಇದರ ಮೂಲಕ ನೀವು ಇರುವ ಸ್ಥಳದಿಂದ 5 ಕಿಮೀ ಒಳಗೆ ನಿಮ್ಮ ಹತ್ತಿರದ ರೈಲ್ವೇ ನಿಲ್ದಾಣದಿಂದ ನಾಲ್ಕು ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಅಲ್ಲದೇ ಈ ಆಪ್‌ ಮೂಲಕ ನಿಲ್ದಾಣದ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಸಹ ಖರೀದಿಸಬಹುದಾಗಿದೆ. ಇದರಲ್ಲಿ ಟಿಕೆಟ್ ಅನ್ನು ರದ್ದುಮಾಡುವ ಸೌಲಭ್ಯವನ್ನು ನೀಡಲಾಗಿದ್ದು, ತ್ವರೀತವಾಗಿ ಟಿಕೆಟ್ ಕಾಯ್ದಿರಿಸಲು ಈ ಆಪ್ ಉಪಯುಕ್ತವಾಗಿದೆ.
 
ನೀವು ಈ ಆಪ್‌ ಅನ್ನು ಬಳಸಲು ಕೆಲವು ಹಂತಗಳನ್ನು ಪೂರೈಸಬೇಕಾಗುತ್ತದೆ. ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಿಕ ನೀವು ನೊಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಹೆಸರು, ವಿಳಾಸ, ಆಗಾಗ ಪ್ರಯಾಣಿಸುವ ಮಾರ್ಗಗಳು ಮತ್ತು ಪಾವತಿ ಆಯ್ಕೆಗಳನ್ನು ಇದರಲ್ಲಿ ಭರ್ತಿಮಾಡುವ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬೇಕು. ನಂತರ ನೀವು ಟಿಕೆಟ್ ಕಾಯ್ದಿರಿಸುವ ಸಲುವಾಗಿ ಎಲೆಕ್ಟ್ರಾನಿಕ್ ವಾಲೆಟ್‌ನ ಐಡಿ ಮತ್ತು ಪಾಸ್‌ವರ್ಡ್ ಅನ್ನು ನೀವು ಪಡೆಯುತ್ತೀರಿ ಆ ಮೂಲಕ ನೀವು ಸುಲಭವಾಗಿ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ.
 
ಒಮ್ಮೆ ಈ ಅಪ್ಲಿಕೇಶನ್ ಮೂಲಕ ಟಿಕೆಟ್ ಅನ್ನು ಕಾಯ್ದಿರಿಸಿದ ನಂತರ ನಿಲ್ದಾಣದಲ್ಲಿರುವ ಸ್ವಯಂಚಾಲಿತ ಟಿಕೆಟ್ ವಿತರಣಾ ಮಶಿನ್‌ನಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ಮತ್ತು ಕಾಯ್ದಿರಿಸಿದ ಟಿಕೆಟ್ ಐಡಿಯನ್ನು ನಮೂದಿಸುವ ಮೂಲಕ ಟಿಕೆಟ್‌ನ ಮುದ್ರಣ ಪ್ರತಿಯನ್ನು ಪಡೆದುಕೊಳ್ಳಬಹುದು. ಅಲ್ಲದೇ ಈ ಆಪ್‌ನಲ್ಲಿ ನೀವು ಪ್ರಯಾಣಿಸುವ ಮೂರು ಗಂಟೆಯ ಮೊದಲು ಟಿಕೆಟ್ ಅನ್ನು ಕಾಯ್ದಿದಿರಿಸಬೇಕಾಗುತ್ತದೆ. 
 
ಅಲ್ಲದೇ ಸಣ್ಣದಾಗಿರುವ ರೈಲ್ವೇ ನಿಲ್ದಾಣದಲ್ಲಿ ಟಿಕೆಟ್‌ನ ಮುದ್ರಣ ಪಡೆಯಲು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳಿರುವುದಿಲ್ಲ. ಆದ ಕಾರಣ ನೀವು ಪ್ರಯಾಣಿಸುವ ಸ್ಥಳವು SWR ವ್ಯಾಪ್ತಿಯೊಳಗೆ ಬರುತ್ತದೆಯೇ ಎಂಬುದನ್ನು ಮೊದಲು ಪ್ರಯಾಣಿಕರು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ SWR ವಲಯದಿಂದ ಹೊರಗೆ ಪ್ರಯಾಣಿಸುವವರು ನಿಯಮಿತ ಕೌಂಟರ್‌ನಿಂದ ಮುದ್ರಿತ ಟಿಕೆಟ್‌ಗಳನ್ನು ಪಡೆದುಕೊಳ್ಳಬೇಕಾಗುತ್ತದೆ. 
 
ನೀವು ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ರೈಲ್ವೇ ನಿಲ್ದಾಣ ತಲುಪುವ ಮೊದಲೇ ಪೂರ್ಣಗೊಳಿಸಬೇಕಾಗುತ್ತದೆ. ನಿಲ್ದಾಣದೊಳಗೆ ಟಿಕೆಟ್‌ಗಳನ್ನು ಅನ್ನು ಕಾಯ್ದಿರಿಸಲು ಈ ಅಪ್ಲಿಕೇಶನ್ ಅನುಮತಿಸುವುದಿಲ್ಲ. ಅಲ್ಲದೇ ನೀವೇನಾದರೂ ಟಿಕೆಟ್‌ಗಳನ್ನು ರದ್ದುಮಾಡಲು ಬಯಸಿದರೆ, ಟಿಕೆಟ್‌ನ ಮುದ್ರಿತ ಪ್ರತಿಯನ್ನು ಪಡೆಯುವ ಮೊದಲೇ ಅಪ್ಲಿಕೇಶನ್‌ನಲ್ಲಿ ರದ್ದುಮಾಡಬಹುದು. ಒಂದು ವೇಳೆ ಮುದ್ರಿತ ಪ್ರತಿಯನ್ನು ಪಡೆದಿದ್ದರೆ ಸಾಮಾನ್ಯ ಟಿಕೆಟ್ ಕೌಂಟರ್‌ಗಳಲ್ಲಿ ಅದನ್ನು ರದ್ದುಮಾಡಬಹುದು.
 
ದಕ್ಷಿಣ ಪಶ್ಚಿಮ ರೈಲ್ವೆ ವಲಯದ ಅಡಿಯಲ್ಲಿ ಬರುವ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಟಿಕೆಟ್‌ಗಳನ್ನು ಮುದ್ರಿಸುವ ಅಗತ್ಯವಿರುವುದಿಲ್ಲ, ಒಂದು ವೇಳೆ ನಿಮ್ಮ ಮೊಬೈಲ್ ಚಾರ್ಚ್ ಖಾಲಿ ಆದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಮುದ್ರಿತ ಟಿಕೆಟ್‌ಗಳನ್ನು ತೋರಿಸಿ ನಿಮ್ಮ ಪ್ರಯಾಣವನ್ನು ಸುಗವಾಗಿಸುವ ಉದ್ದೇಶದಿಂದ ಈ ವಲಯವನ್ನು ಹೊರತುಪಡಿಸಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಟಿಕೆಟ್‌ನ ಮುದ್ರಣ ಪ್ರತಿಯನ್ನು ಹೊಂದಿರಬೇಕಾಗುತ್ತದೆ.
 
ಈಗಾಗಲೇ ಈ ಅಪ್ಲಿಕೇಶನ್ ಕಳೆದ ಗುರುವಾರ ಕೇಂದ್ರ ರೈಲ್ವೇ ಮಂತ್ರಿಯಾದ ಪಿಯೂಷ್ ಗೋಯೆಲ್ ಬಿಡುಗಡೆಗೊಳಿಸಿದ್ದು, ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಸುಮಾರು 960 ಜನರು ಅಪ್ಲಿಕೇಶನಲ್ಲಿ ನೊಂದಾಯಿಸಿಕೊಂಡಿದ್ದಾರೆ ಸುಮಾರು 67000 ಜನರು ಈ ಅಪ್ಲಿಕೇಶನ್ ಅನ್ನು ಡೌನ್‌ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ