ಭಾರತದ ಮಾರುಕಟ್ಟೆಯಲ್ಲಿ ತನ್ನ ವಿಶೇಷವಾದ ವಿನ್ಯಾಸ ಮತ್ತು ಗುಣಮಟ್ಟದಿಂದ ಮೊಬೈಲ್ ವಲಯದಲ್ಲಿ ಕ್ರಾಂತಿ ಮಾಡಿದ್ದ ಮೊಟೊ ತನ್ನ ನೂತನ ಫೋನ್ ಆದ ಮೊಟೊ Z2 ಪೋರ್ಸ್ ಅನ್ನು ಇಂದು ಮಾರುಕಟ್ಟೆಗೆ ಪರಿಚಯಿಸಲಿದೆ. ಮೂಲಗಳ ಪ್ರಕಾರ ಇಂದು 12 ಗಂಟೆಗೆ ಲೈವ್ ಕಾರ್ಯಕ್ರಮದಲ್ಲಿ ಈ ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಮೊಬೈಲ್ ಕುರಿತಂದೆ ಸಾಕಷ್ಟು ಕೂತುಹಲ ಉಂಟಾಗಿದ್ದು ಈ ಫೋನ್ ಇತರ ಫೋನ್‌ಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡೋಣ.
ಮೊಟೊ Z2 ಪೋರ್ಸ್ ವೈಶಿಷ್ಟ್ಯಗಳು -
ಮೊಟೊ Z2 ಪೋರ್ಸ್ ತನ್ನ ಹಳೆಯ ಆವೃತ್ತಿಯಾದ ಮೊಟೊ Z2 ಪ್ಲೇಗಿಂತ ಹೆಚ್ಚು ವಿಶೇಷವಾಗಿದ್ದು, 5.5 ಇಂಚಿನ QHD (1440x2560 ಪಿಕ್ಸೆಲ್‌ಗಳು) ಷಟರ್ ಷೀಲ್ಡ್ POLED ಪರದೆಯನ್ನು ಈ ಫೋನ್ ಹೊಂದಿದೆ. ಇದು ಆಂಡ್ರೊಯ್ಡ್ 8.0 ಓರಿಯೊ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಇದರಲ್ಲಿ 4 GB ಮತ್ತು 6GB ಎರಡು ಮಾದರಿಯ ಫೋನ್‌ಗಳನ್ನು ನಾವು ಕಾಣಬಹುದಾಗಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 835 SoC ಅನ್ನು ಈ ಫೋನ್ ಹೊಂದಿದೆ.
ಈ ಫೋನ್‌ನಲ್ಲಿ ಕ್ಯಾಮರಾ ಕುರಿತು ಹೇಳುವುದಾದರೆ ಇದು ಡ್ಯೂಯಲ್ ಕ್ಯಾಮರಾವನ್ನು ಹೊಂದಿದೆ. ಇದು PDAF, ಲೇಸರ್ ಆಟೋಫೋಕಸ್ ತಂತ್ರಜ್ಞಾನ ಹಾಗೂ ಸೋನಿ IMX386 ಸೆನ್ಸಾರ್‌ಗಳನ್ನು ಹೊಂದಿರುವ 12 ಮೆಗಾಫಿಕ್ಸೆಲ್‌ನ 2 ಕ್ಯಾಮರಾವನ್ನು ಹಿಂಬದಿಯಲ್ಲಿ ಹೊಂದಿದ್ದು, ಮುಂಬದಿಯಲ್ಲಿ f/2.2 ಅಪಾಚರ್ ಮತ್ತು 85-ಡಿಗ್ರಿ ವೈಡ್ ಆಂಗಲ್ ಲೈನ್ಸ್ ನೊಂದಿಗೆ 5 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಹೊಂದಿದೆ. ಇದರ ಎರಡು ಕಡೆಯಲ್ಲಿ ಎಲ್‌ಇಡಿ ಫ್ಲಾಶ್ ಅನ್ನು ಇದ್ದು, ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ಸೆಲ್ಫಿಗಳನ್ನು ತೆಗೆಯಬಹುದಾಗಿದೆ.
ಈ ಫೋನ್ ಸಾಕಷ್ಟು ವೆಶಿಷ್ಟ್ಯಪೂರ್ಣವಾಗಿದ್ದು, ಇದರಲ್ಲಿ ಡ್ಯೂಯಲ್ ಬಾಂಡ್ ವೈಫೈ 802.11ac ಅನ್ನು ನಾವು ಕಾಣಬಹುದಾಗಿದೆ ಅಲ್ಲದೇ ಇದರಲ್ಲಿ 4.2 ಬ್ಲೂಟೂತ್, NFC, ಜಿಪಿಎಸ್, A-ಜಿಪಿಎಸ್, ಯುಎಸ್‌ಬಿ ಟೈಪ್ C ಮತ್ತು 4G LTE ಅನ್ನು ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ಪ್ರಾಕ್ಸಿಮೆಟಿ ಸೆನ್ಸಾರ್, ಮ್ಯಾಗ್ನೆಟೊಮೀಟರ್, ಗೈರೋಸ್ಕೋಪ್, ಬೊರೊಮೀಟರ್, ಎಂಬೈಟ್ ಲೈಟ್ ಸೆನ್ಸಾರ್ ಮತ್ತು ಅಕ್ಸೆಲೆರೊಮೀಟರ್ ಅನ್ನು ಅಳವಡಿಸಲಾಗಿದೆ. ಅದಲ್ಲದೇ ಇದರಲ್ಲಿ 2730mAh ಬ್ಯಾಟರಿ ಇದ್ದು ಇದರೊಟ್ಟಿಗೆ 5999 ಬೆಲೆಯ ಮೊಟೊ ಟರ್ಬೋಪವರ್ ಪ್ಯಾಕ್ ಅನ್ನು ನೀವು ಪಡೆಯಬಹುದಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ ಮೊಟೊ ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಜನರ ವಿಶ್ವಾಸಗಳಿಸಿದ್ದು, ಮೊಟೊ Z2 ಪೋರ್ಸ್ ಮಾರುಕಟ್ಟೆಯಲ್ಲಿ ಬಾರಿ ಕೂತುಹಲ ಮೂಡಿಸಿದೆ. ಬೆಲೆಗಳ ಕುರಿತಾಗಿ ಅಧಿಕೃತವಾಗಿ ಇಂದಿನ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳುವುದಾಗಿ ಕಂಪನಿ ತಿಳಿಸಿದ್ದು, ಬಲ್ಲ ಮೂಲಗಳ ಪ್ರಕಾರ 51,200 ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಸೀಮಿತ ಅವಧಿಯ ಫೋನ್ ಆಗಿದ್ದು, ಮುಂದಿನ ವಾರದಿಂದ ಪ್ಲಿಫ್‌ಕಾರ್ಟ್, ಅಮೆಜಾನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ ಅಲ್ಲದೇ ಈ ಫೋನ್ ಮೊಟೊ ಹಬ್ ಮತ್ತು ಮೊಟೊ ಸ್ಟೋರ್‌ಗಳಲ್ಲೂ ಸಹ ಲಭ್ಯವಿರಲಿದೆ.