ಜಿಯೊ ಫೋನ್ ಬಳಕೆದಾರರಿಗೆ ಹೊಸ ಕೊಡುಗೆ...!!

ನಾಗಶ್ರೀ ಭಟ್

ಗುರುವಾರ, 15 ಫೆಬ್ರವರಿ 2018 (13:22 IST)
ಜಿಯೊ ತನ್ನ ಸೇವೆಯನ್ನು ಆರಂಭಿಸಿದಾಗಿನಿಂದಲೂ ತನ್ನ ಗ್ರಾಹಕರಿಗೆ ಹತ್ತು ಹಲವು ಆಫರ್‌ಗಳನ್ನು ನೀಡುತ್ತಲೇ ಬಂದಿದ್ದು ಈಗ ಫೇಸ್‌ಬುಕ್ ಆ್ಯಪ್ ಅನ್ನು ನೀಡುತ್ತಿದೆ. ಇಂದಿನಿಂದ ಜಿಯೊ ಫೋನ್ ಅನ್ನು ಬಳಸುತ್ತಿರುವವರು ತಮ್ಮ ಫೋನ್‌ನಲ್ಲಿರುವ ಆ್ಯಪ್ ಸ್ಟೋರ್‌ಗೆ ಹೋದರೆ ಫೇಸ್‌ಬುಕ್ ಆ್ಯಪ್ ಲಭ್ಯವಾಗಲಿದೆ ಎಂದು ಪ್ರಕಟಿಸಿದ್ದಾರೆ.
"ಜಿಯೊ ಫೋನ್ ವಿಶ್ವದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಎಂಬ ಹೆಗ್ಗೆಳಿಕೆಗೆ ಜಿಯೊ ಫೋನ್ ಪಾತ್ರವಾಗಿದ್ದು ಇದನ್ನು ಭಾರತೀಯರಿಗಾಗಿಯೇ ವಿನ್ಯಾಸಗೊಳಿಸಲಾಗಿದ್ದು ಹೆಚ್ಚಿನ ಜನರು ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ಗಳಿಗೆ ವಲಸೆ ಹೋಗಿದ್ದಾರೆ. ಭರವಸೆ ನೀಡಿದಂತೆ, ಫೇಸ್‌ಬುಕ್‌ನಿಂದ ಪ್ರಾರಂಭಿಸಿ ವಿಶ್ವದ ಪ್ರಮುಖ ಅಪ್ಲಿಕೇಶನ್‌ಗಳಿಗೆ ಇದು ಮನೆಯಾಗಲಿದೆ. ಜಿಯೊ ಪ್ರಪಂಚದ ಅತಿ ದೊಡ್ಡ ಡೇಟಾ ನೆಟ್‌ವರ್ಕ್ ಆಗಿದ್ದು ಇದನ್ನು ಪ್ರತಿ ಭಾರತೀಯನಿಗೂ ಡೇಟಾವನ್ನು ಒದಗಿಸಿ ಅವರನ್ನು ಸಶಕ್ತಗೊಳಿಸಲು ನಿರ್ಮಿಸಲಾಗಿದೆ ಮತ್ತು ಜಿಯೊ ಫೋನ್ ಈ ಆಂದೋಲನದ ಅವಿಭಾಜ್ಯ ಅಂಗವಾಗಿದೆ" ಎಂದು ಜಿಯೊ ಕಂಪನಿಯ ನಿರ್ದೇಶಕ ಅನಿಲ್ ಅಂಬಾನಿ ಹೇಳಿದ್ದಾರೆ.
 
"ಜಿಯೊ ಫೋನ್‌ನೊಂದಿಗಿನ ನಮ್ಮ ಪಾಲುದಾರಿಕೆಯನ್ನು ಮತ್ತು ಜಿಯೊ ಫೋನ್‌ ಅನ್ನು ಬಳಸಿಕೊಂಡು ಲಕ್ಷಾಂತರ ಜನರಿಗೆ ಫೇಸ್‌ಬುಕ್‌ನ ಉತ್ತಮ ಅನುಭವವನ್ನು ಒದಗಿಸುವ ಅವಕಾಶಕ್ಕಾಗಿ ನಾವು ಖುಶಿಪಡುತ್ತೇವೆ. ಜಿಯೊದಂತಹ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಖುಶಿತಂದಿದೆ, ಎಲ್ಲಾಕಡೆ ಸಂಪರ್ಕ ಹೊಂದಿರುವ ಪ್ರಯೋಜನಗಳನ್ನು ಆನಂದಿಸುವ ಅವಕಾಶಗಳನ್ನು ಹೊಂದಿದ್ದೀರಿ ಎಂಬುದನ್ನು ಎಲ್ಲರಿಗೂ ಖಚಿತಪಡಿಸಲು ಬಯಸುತ್ತೇವೆ" ಎಂದು ಫೇಸ್‌ಬುಕ್‌ನ ಮೊಬೈಲ್ ಪಾಲುದಾರಿಕೆಗಳ ಉಪಾಧ್ಯಕ್ಷ ಫ್ರಾನ್ಸಿಸ್ಕೋ ವರೇಲಾ ಹೇಳಿದರು.
 
2017 ರ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಫೀಚರ್ ಫೋನ್ ಆಗಿದೆ. ಈಗಾಗಲೇ ಜಿಯೊ ಫೋನ್ ಬಳಸುತ್ತಿರುವವರು ಮತ್ತು ಮುಂದೆ ಬಳಸುವವರು ಜಿಯೊದ ಈ ಫೇಸ್‌ಬುಕ್ ಆ್ಯಪ್‌ನ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ