ದೇಶದ 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂ.ಗೆ ವಾರಸುದಾರರಿಲ್ಲ- ಐಆರ್‌ಡಿಎಐ
ಸೋಮವಾರ, 30 ಜುಲೈ 2018 (12:51 IST)
ನವದೆಹಲಿ : ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ ಎಂದು ಇಂಡಿಯನ್ ಇನ್ಶುರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಐಆರ್‌ಡಿಎಐ) ಶಾಕಿಂಗ್ ವಿಚಾರವೊಂದನ್ನು ಹೊರಹಾಕಿದೆ.
ಮಾರ್ಚ್ 31, 2018ರವರೆಗೆ 15,166.47 ಕೋಟಿ ರೂ. ಬಾಕಿ ಉಳಿದಿದ್ದು, ಅದರ ಪೈಕಿ ಎಲ್‌ಐಸಿ 10,509 ಕೋಟಿ ರೂ. ಹೊಂದಿದ್ದರೆ, ಉಳಿದ 22 ಖಾಸಗಿ ಸಂಸ್ಥೆಗಳು 4,657.47 ಕೋಟಿ ರೂ. ಹೊಂದಿವೆ. ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಸೂರೆನ್ಸ್ ಕೊ. 807.4 ಕೋಟಿ ರೂ., ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಸೂರೆನ್ಸ್ 696.12 ಕೋಟಿ ರೂ., ಎಸ್‌ಬಿಐ ಲೈಫ್ ಇನ್ಸೂರೆನ್ಸ್ 678.59 ಕೋಟಿ ರೂ. ಮತ್ತು ಎಚ್‌ಡಿಎಫ್‌ಸಿ ಸ್ಟಾಂಡರ್ಡ್ ಲೈಫ್ ಇನ್ಸೂರೆನ್ಸ್ 659.3 ಕೋಟಿ ರೂ. ವಾರಸುದಾರರಿಲ್ಲದ ವಿಮಾ ಹಣವನ್ನು ಹೊಂದಿದ್ದಾವೆ ಅಂತ ಐಆರ್‌ಡಿಎಐ ಅಂತ ಹೇಳಿದೆ
ಹಾಗೇ ವಿಮೆ ಮಾಡಿ ಮರೆತಿರುವ ಅಥವಾ ವಿಮೆ ಮಾಡಿರುವ ಬಗ್ಗೆ ವಾರಸುದಾರರಿಗೆ ಗೊತ್ತಿಲ್ಲದ ಕಾರಣ ಕಂಪನಿ ಬಳಿಯೇ ಹಣವಿದೆ. ಆನ್ಲೈನ್ ನಲ್ಲಿ ಇಂಥವರ ಹೆಸರು ಹಾಗೂ ವಾರಸುದಾರರ ಹೆಸರು ಹಾಕಿ ಶೀಘ್ರವೇ ಹಣ ವಾಪಸ್ ನೀಡಿ ಎಂದು ಐಆರ್ಡಿಎಐ ಸೂಚನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ