ಒನ್‍ಪ್ಲಸ್ 3ಟಿ ಇನ್ನು ಮೇಲೆ ಮೇಡಿನ್ ಇಂಡಿಯಾ

ಭಾನುವಾರ, 18 ಡಿಸೆಂಬರ್ 2016 (06:32 IST)
ಪ್ರಸಿದ್ಧ ಚೀನಾ ಮೊಬೈಲ್ ಕಂಪನಿ ಒನ್‌ಪ್ಲಸ್ ತನ್ನ ಒನ್‍ಪ್ಲಸ್ 3ಟಿ ಮಾಡೆಲನ್ನು ಭಾರತದಲ್ಲಿ ತಯಾರಿಸಬೇಕೆಂದು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮಾಡೆಲ್‌ಗೆ ಒಳ್ಳೆ ಬೇಡಿಕೆ ಇರುವ ಕಾರಣ, ಇನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಈ ನಿರ್ಣಯಕ್ಕೆ ಕಂಪನಿ ಬಂದಿದೆ.
 
ಇನ್ನೊಂದು ಕಡೆ ಎಕ್ಸ್ ಸೀರೀಸ್ ಮಾಡೆಲ್‌ಗಳನ್ನು ತಯಾರಿಸಲು ಫಾಕ್ಸ್‌ಕಾನ್ ಟೆಕ್ನಾಲಜಿಯೊಂದಿಗೆ ಮಾಡಿಕೊಂಡಿದ್ದ 2015ರ ಒಡಂಬಡಿಕೆಯನ್ನು ರದ್ದುಪಡಿಸಿಕೊಂಡಿದೆ. ಮುಂದಿನ ವರ್ಷದಿಂದ ಒನ್‍ಪ್ಲಸ್ 3ಟಿ ಮಾಡೆಲ್ ಮೊಬೈಲನ್ನು ಭಾರತದಲ್ಲೇ ತಯಾರಿಸಬೇಕೆಂದು ಭಾವಿಸುತ್ತಿರುವುದಾಗಿ ಭಾರತದ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಅಗರ್ವಾಲ್ ತಿಳಿಸಿದ್ದಾರೆ.
 
ವಾಸ್ತವವಾಗಿ ಬೇಡಿಕೆಗೆ ತಕ್ಕಂತೆ ಸೆಟ್‌ಗಳನ್ನು ತಯಾರಿಸಲು ಸಾಧ್ಯವಾಗದ ಕಾರಣ ಶೇ. 30ರಷ್ಟು ಮಾರುಕಟ್ಟೆಯನ್ನು ಕಳೆದುಕೊಂಡಿದ್ದೇವೆ. ಬೇಡಿಕೆಯನ್ನು ಪೂರೈಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ. ಒನ್‌ಪ್ಲಸ್ ಮೊಬೈಲ್‍ಗಳನ್ನು ರೀಟೇಲ್ ಮಳಿಗೆಗಳಲ್ಲಿ ಮಾರಾಟ ಮಾಡುವ ಉದ್ದೇಶ ಸದ್ಯಕ್ಕಿಲ್ಲ. ಅಮೆಜಾನ್ ಮೂಲಕ ಆನ್‌ಲೈನ್‌ನಲ್ಲೇ ಮಾರಾಟ ಮುಂದುವರೆಸುತ್ತೇವೆ ಎಂದಿದ್ದಾರೆ. ಒನ್‌ಪ್ಲಸ್ 3ಟಿ ಬೆಲೆ ರು. 29,999. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ