ಚುನಾವಣೆ ಹೊಸ್ತಿಲಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

Krishnaveni K

ಶುಕ್ರವಾರ, 15 ಮಾರ್ಚ್ 2024 (10:01 IST)
Photo Courtesy: Twitter
ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿ ಜನರಿಗೆ ಗಿಫ್ಟ್ ಕೊಟ್ಟಿದೆ.

ದೇಶದಾದ್ಯಂತ ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 2 ರೂ. ಕಡಿತವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿರುವುದು ಸಾರ್ವಜನಿಕರ ದೈನಂದಿನ ವೆಚ್ಚದಲ್ಲಿ ಸಾಕಷ್ಟು ಹೊರೆ ಕಡಿಮೆಯಾಗಲಿದೆ.  ಇದರಿಂದ ದೇಶದ ಹಲವು ನಗರಗಳಲ್ಲಿ ತಕ್ಕ ಮಟ್ಟಿಗೆ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗಿದೆ. ಅವುಗಳ ಬೆಲೆ ಇಲ್ಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 94.72 ರೂ. ಮತ್ತು ಡೀಸೆಲ್ ಬೆಲೆ87.62 ರೂ. ಆಗಲಿದೆ. ಲಕ್ನೋದಲ್ಲಿ ಪೆಟ್ರೋಲ್ ಬೆಲೆ 94.65 ರೂ., ಆಗ್ರಾದಲ್ಲಿ 94.35 ರೂ., ಡೀಸೆಲ್ 87.41 ರೂ.ಗೆ ಇಳಿಕೆಯಾಗಿದೆ. ಮೀರತ್ ನಲ್ಲಿ 96.31 ರೂ. ಗಳಿಂದ 94.43 ರೂ. ಗೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂ. ಗಳಿತ್ತು. ಆದರೆ ಈಗ 99.94 ರೂ.ಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 87.89 ರೂ.ಗಳಿತ್ತು. ಇದೀಗ 85.89 ರೂ. ಗೆ ಇಳಿಕೆಯಾಗಿದೆ. ಕೋಲ್ಕೊತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ.ಗಳಷ್ಟಿತ್ತು. ಇದೀಗ 103.94 ರೂ. ಗೆ ಇಳಿಕೆಯಾಗಿದೆ. ಡೀಸೆಲ್ ಗೆ 92.76 ರೂ.ಗಳಿಂದ 90.76 ರೂ.ಗೆ ಇಳಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ