ಪಿವಿಆರ್ ’ಥಿಯೇಟರ್ ಆನ್ ಡಿಮ್ಯಾಂಡ್’ ಆರಂಭ

ಶನಿವಾರ, 21 ಜನವರಿ 2017 (13:20 IST)
ಮಲ್ಟಿಫ್ಲೆಕ್ಸ್ ಸರಣಿ ಆಪರೇಟರ್ ಪಿವಿಆರ್ ಸಿನಿಮಾಸ್ ಸಂಸ್ಥೆ ಥಿಯೇಟರ್ ಆನ್ ಡಿಮಾಂಡ್ ಸೇವೆಯನ್ನು ’ವಿಕೆಎಎಓ’ ಆರಂಭಿಸಿದೆ. ಬರುವ ಆರ್ಥಿಕ ವರ್ಷದಲ್ಲಿ ದೇಶದಾದ್ಯಂತ ಥಿಯೇಟರ್ ಆನ್ ಡಿಮ್ಯಾಂಡ್ ಸೇವೆಗೆ ನೂರು ಸ್ಕ್ರೀನ್‌ಗಳನ್ನು ಸೇರಿಸುವುದಾಗಿ ಪಿವಿಆರ್ ತಿಳಿಸಿದೆ. ಈ ಆರ್ಥಿಕ ವರ್ಷದ ಕೊನೆಗೆ 30 ಸ್ಕ್ರೀನ್‌ಗಳನ್ನು ಸೇರಿಸಲಿದೆ. 
 
ವಿಕೆಎಎಒ ವೆಬ್ ಪ್ಲಾಟ್‌ಫಾರಂ ಮೂಲಕ ಯಾರಾದರೂ ತಮಗೆ ಇಷ್ಟವಾದ ಸಿನಿಮಾಗಳನ್ನು ತಮಗೆ ಇಷ್ಟವಾದ ಚಿತ್ರಮಂದಿರದಲ್ಲಿ ಹಾಕಿಸಿಕೊಳ್ಳಬಹುದು. ಆದರೆ ಶೋ ನಡೆದಲು ಕನಿಷ್ಠ 50 ಸೀಟ್‌ಗಳು ಬುಕ್ ಆಗಬೇಕಾಗುತ್ತದೆ. 
 
ಹೊಸದಾಗಿ ಏರ್ಪಾಟು ಮಾಡಿದ ಸ್ಕ್ರೀನ್‍ಗಳಲ್ಲಿ ಈಗಾಗಲೆ ತಮ್ಮ ಸೇವೆ ಇರುವ ನಗರಗಳಲ್ಲಿ, ಉಳಿದವು ಹೊಸ ನಗರಗಳಲ್ಲಿ ಏರ್ಪಾಟು ಮಾಡುತ್ತೇವೆಂದು ಪಿವಿಎಆ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕುಮಾರ್ ಬಿಬ್ಲಿ ಹೇಳಿದ್ದಾರೆ. ಪ್ರಸ್ತುತ ವಿವಿಧ ಭಾಷೆಗಳು, ಜಾನರ್‌ಗಳನ್ನು 500 ಸಿನಿಮಾಗಳೊಂದಿಗೆ ಈ ಸೇವೆಯನ್ನು ಆರಂಭಿಸಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ