ಸೇನೆ, ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್‌: ರಾಯಚೂರಿನಲ್ಲಿ ಮುಸ್ಲಿಂ ವ್ಯಕ್ತಿ ಅರೆಸ್ಟ್‌

Sampriya

ಗುರುವಾರ, 15 ಮೇ 2025 (15:35 IST)
ರಾಯಚೂರು: ಭಾರತ ಮತ್ತು ಪಾಕಿಸ್ತಾನದ  ನಡುವೆ ಉದ್ವಿಗ್ನತೆ ಇರುವಾಗಲೇ ವ್ಯಕ್ತಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗುವ ಘಟನೆಗೆಳು ಅಲ್ಲಲ್ಲಿ ನಡೆದಿದೆ.  

ಪಾಕ್ ವಿರುದ್ಧ ಪ್ರತೀಕಾರ ಹೆಚ್ಚಾಗುತ್ತಿರುವ ವೇಳೆ ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವುದು, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸುವಂಥ ಪ್ರತ್ಯಗಳು ಹೆಚ್ಚಾಗ ತೊಡಗಿವೆ.

ಇದೀಗ ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ರಫೇಲ್ ಯುದ್ಧ ವಿಮಾನ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದಾನೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಪೊಲೀಸರು ಆರೋಪಿ ಅಜ್ಮೀರ್‌ನನ್ನು (37) ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ.

ಚಕ್ಕಡಿ ಮೇಲೆ ಅಳುತ್ತಾ ಕುಳಿತುಕೊಂಡಿರುವ ಪ್ರಧಾನಿ ಮೋದಿ, ಅದರ ಮೇಲೆ ರಫೇಲ್ ಯುದ್ಧ ವಿಮಾನವನ್ನು ಸಾಗಿಸುತ್ತಿರುವ ಚಿತ್ರವುಳ್ಳ ಪೋಸ್ಟ್ ಅನ್ನು ಅಜ್ಮೀರ್ ಪ್ರಕಟಿಸಿದ್ದ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿರುವ ತುರ್ವಿಹಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ