ನವದೆಹಲಿ : ಎಟಿಎಂಗಳ ಕಳ್ಳತನ ಪ್ರಕರಣ ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂಗಳ ಸುರಕ್ಷತೆಗಾಗಿ ಹೊಸ ಆದೇಶವೊಂದನ್ನು ಹೊರಡಿಸಿದೆ.
ಸೆಪ್ಟಂಬರ್ ಒಳಗೆ ಎಲ್ಲಾ ಬ್ಯಾಂಕುಗಳ ಎಟಿಎಂ ಮೆಷಿನ್ ಗಳನ್ನು ಗೋಡೆಗೆ ಅಳವಡಿಸುವಂತೆ ಆರ್.ಬಿ.ಐ ಸೂಚಿಸಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಿದೆ.
ಆದರೆ ವಿಮಾನ ನಿಲ್ದಾಣಗಳಂತಹ ಹೆಚ್ಚಿನ ಭದ್ರತೆ ಇರುವ ಪ್ರದೇಶಗಳಿಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ ಅಲ್ಲಿ ರಾಜ್ಯ ಅಥವಾ ಕೇಂದ್ರ ಸುರಕ್ಷತಾ ಸಿಬ್ಬಂದಿಯೂ ಇರುತ್ತಾರೆ ಎಂಬುದಾಗಿ ತಿಳಿಸಿದೆ.