ಎಟಿಎಂ ನಲ್ಲಿ ಹಣ ಖಾಲಿಯಾದ 3 ಗಂಟೆಯೊಳಗೆ ಹಣ ತುಂಬದಿದ್ದರೆ ಬ್ಯಾಂಕುಗಳಿಗೆ ಬೀಳುತ್ತೆ ಭಾರೀ ದಂಡ
ಭಾನುವಾರ, 16 ಜೂನ್ 2019 (08:41 IST)
ನವದೆಹಲಿ : ಎಟಿಎಂಗೆ ಹಣ ಹಾಕದೇ ಬೇಜವಬ್ದಾರಿಯಿಂದ ವರ್ತಿಸುವ ಬ್ಯಾಂಕುಗಳಿಗೆ ಕಡಿವಾಣ ಹಾಕಲು ಇದೀಗ ಆರ್.ಬಿ.ಐ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ತುರ್ತು ಸಂದರ್ಭದಲ್ಲಿ ಹಣದ ಅವಶ್ಯಕತೆಯಿದ್ದ ಗ್ರಾಹಕರು ಹಣ ತೆಗೆಯಲು ಎಂಟಿಎಂ ಗೆ ಬಂದಾಗ ಹಣ ಹಾಕದೇ ಇದ್ದರೆ ಬಹಳಷ್ಟು ಸಮಸ್ಯೆಯಾಗುತ್ತದೆ. ಎಟಿಎಂಗಳಲ್ಲಿ ಹಣ ಖಾಲಿಯಾಗಿರುವ ಕುರಿತು ಬ್ಯಾಂಕುಗಳಿಗೆ ಸೆನ್ಸಾರ್ ಮೂಲಕ ಮಾಹಿತಿ ಲಭ್ಯವಾಗುತ್ತಾದರೂ ಆ ಬಗ್ಗೆ ಬ್ಯಾಂಕುಗಲು ನಿರ್ಲಕ್ಷ್ಯ ತೋರುತ್ತಿದೆ. ಇದನ್ನು ಮನಗೊಂಡ ಆರ್.ಬಿ.ಐ. ಹಣ ತುಂಬದ ಬ್ಯಾಂಕುಗಳಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದೆ.
ಎಟಿಎಂಗಳಲ್ಲಿ ಹಣ ಖಾಲಿಯಾದ ಮೂರು ಗಂಟೆಗಳಲ್ಲಿ ಅದಕ್ಕೆ ಹಣ ತುಂಬದಿದ್ದರೆ ಅಂತಹ ಬ್ಯಾಂಕುಗಳಿಗೆ ದಂಡ ವಿಧಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದ್ದು, ಈ ಕುರಿತು ಹೊಸ ಕಾನೂನು ರೂಪಿಸಲು ಚಿಂತನೆ ನಡೆಸಿದೆ ೆಂಬುದಾಗಿ ತಿಳಿದುಬಂದಿದೆ.