ಆರ್‌ಬಿಐನಿಂದ ರೆಪೋ ದರ ಕಡಿತ: ಗೃಹ , ಮನೆ ಸಾಲ ಬಡ್ಡಿ ದರ ಅಗ್ಗ

ಮಂಗಳವಾರ, 4 ಅಕ್ಟೋಬರ್ 2016 (18:29 IST)
ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಗವರ್ನರ್ ಆಗಿ ನೇಮಕಗೊಂಡ ಉರ್ಜಿತ್ ಪಟೇಲ್, ತಮ್ಮ ಮೊದಲ ಪರಿಷ್ಕರಣ ಸಭೆಯಲ್ಲಿ ರೆಪೋ ದರಗಳಲ್ಲಿ  ಶೇ.0.25 ರಷ್ಟು ಕಡಿತಗೊಳಿಸಿದ್ದಾರೆ. ಇದರಿಂದಾಗಿ ಗೃಹ, ವಾಹನ ಸಾಲದ ಮೇಲಿನ ಬಡ್ಡಿ ದರ ಅಗ್ಗವಾಗಲಿದೆ. 
 
ದೇಶದ ಆರ್ಥಿಕತೆ ಚೇತರಿಕೆಗೊಳಿಸುವ ನಿಟ್ಟಿನಲ್ಲಿ ರೆಪೋ ದರಗಳಲ್ಲಿ ಬದಲಾವಣೆ ಮಾಡಲು ಮಾಜಿ ಗವರ್ನರ್ ರಘುರಾಮ್ ರಾಜನ್ ನಿರಾಕರಿಸಿದ್ದರು. ಇದೀಗ ಆರು ತಿಂಗಳುಗಳ ನಂತರ ರೆಪೋ ದರದಲ್ಲಿ ಕಡಿತವಾಗಿದೆ. 
 
ಭಾರತೀಯ ರಿಸರ್ವ್ ಬ್ಯಾಂಕ್ ನಡೆಯಿಂದಾಗಿ ಗೃಹ, ಕಾರು, ಕಾರ್ಪೋರೇಟ್ ಸಾಲಗಳ ಮೇಲಿನ ಮಾಸಿಕ ಬಡ್ಡಿ ದರದಲ್ಲಿ ಕಡಿತವಾಗಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. 
 
 ಭಾರತೀಯ ರಿಸರ್ವ್ ಬ್ಯಾಂಕ್ ಅಡಳಿತ ಮಂಡಳಿಯ ಆರು ಮಂದಿ ಸದಸ್ಯರು ರೆಪೋ ದರ ಕಡಿತದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಆರ್‌‍ಬಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ