ಶೀಘ್ರದಲ್ಲಿಯೇ 20 ರೂಪಾಯಿಯ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಆರ್.ಬಿ.ಐ.

ಭಾನುವಾರ, 28 ಏಪ್ರಿಲ್ 2019 (06:44 IST)
ನವದೆಹಲಿ : ಶೀಘ್ರದಲ್ಲಿಯೇ ಆರ್.ಬಿ.ಐ. 20 ರೂಪಾಯಿಯ ಹೊಸ ನೋಟನ್ನು ಬಿಡುಗಡೆ ಮಾಡಲಿರುವುದಾಗಿ ಮಾಹಿತಿ ನೀಡಿದೆ.

ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಆರ್.ಬಿ.ಐ. ಈ ಬಗ್ಗೆ ಮಾಹಿತಿ ನೀಡಿದೆ. ಹಾಗೇ ಹೊಸ ನೋಟಿನ ಜೊತೆ ಹಳೆ 20 ರೂಪಾಯಿ ನೋಟು ಕೂಡ ಚಾಲ್ತಿಯಲ್ಲಿರಲಿದೆ ಎಂದು ಆರ್.ಬಿ.ಐ. ಹೇಳಿದೆ.

 

ಆರ್.ಬಿ.ಐ. ನೀಡಿದ ಮಾಹಿತಿ ಪ್ರಕಾರ, 20 ರೂಪಾಯಿ ಹೊಸ ನೋಟಿನ ಮುಂಭಾಗದ ಮಧ್ಯದಲ್ಲಿ ಮಹಾತ್ಮಾಗಾಂಧಿ ಫೋಟೋ ಇರಲಿದೆ. ಹಿಂದಿ ಹಾಗೂ ಇಂಗ್ಲೀಷ್ ಅಂಕೆಯಲ್ಲಿ ನೋಟಿನ ಮೌಲ್ಯವಿರಲಿದೆ. ನೋಟಿನ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿರಲಿದೆ. ಹಿಂದಿನ ಭಾಗದಲ್ಲಿ ಗುಹೆಯ ಚಿತ್ರವಿರಲಿದೆ. ನೋಟು 63 ಎಂಎಂ ಅಗಲ ಹಾಗೂ 129 ಮಿಮಿ ಉದ್ದವಿರಲಿದೆ. ಹೊಸ 20 ರೂಪಾಯಿಯಲ್ಲಿ ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಸಹಿಯಿರಲಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ