ಬೆಂಗಳೂರು: ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರೂ ಆಗಿರುವ ಅರ್ ಅಶ್ವಿನ್ ವಿರುದ್ಧ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಆರ್ ಸಿಬಿ ನಾಯಕ ಕೊಹ್ಲಿ ತಮ್ಮ ಟೀಂ ಇಂಡಿಯಾ ಸಹ ಆಟಗಾರ ಆರ್ ಅಶ್ವಿನ್ ರನ್ನು ಔಟ್ ಮಾಡಿದ ಬಳಿಕ ಮಂಕಡ್ ಔಟ್ ನ್ನು ನೆನಪಿಸಿ ವ್ಯಂಗ್ಯ ಮಾಡಿ ಸೆಂಡ್ ಆಫ್ ಮಾಡಿದ್ದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವ ತೋರಿಸುವುದು ಸರ್ವೇ ಸಾಮಾನ್ಯ. ಆದರೆ ಐಪಿಎಲ್ ಬಿಟ್ಟರೆ ತಮ್ಮದೇ ಟೀಂ ಇಂಡಿಯಾದಲ್ಲಿ ಸಹ ಆಟಗಾರರಾಗಿರುವ ಆಟಗಾರನ ಬಗ್ಗೆಯಾದರೂ ಕೊಹ್ಲಿ ಕನಿಷ್ಠ ಗೌರವ ತೋರಬೇಕಿತ್ತು ಎನ್ನುವುದು ಹಲವರ ಅಭಿಪ್ರಾಯ.
ಹಿಂದೊಮ್ಮೆ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಎದುರಾಳಿ ತಂಡದ ಆಟಗಾರರು ಕೊಹ್ಲಿಯನ್ನು ಅಣಕಿಸಿದ್ದಕ್ಕೆ ಅಶ್ವಿನ್ ನೇರವಾಗಿ ಎದುರಾಳಿ ಆಟಗಾರನ ಬಳಿ ಹೋಗಿ ನಮ್ಮ ನಾಯಕನನ್ನು ಕೆಣಕಲು ನಿನಗೆಷ್ಟು ಧೈರ್ಯ ಎಂದು ಪ್ರಶ್ನಿಸಿದ ಘಟನೆ ಇಂದಿಗೂ ಕ್ರಿಕೆಟ್ ಪ್ರಿಯರಿಗೆ ನೆನಪಿದೆ. ವಿಪರ್ಯಾಸವೆಂದರೆ ಇಂದು ಅದೇ ಕೊಹ್ಲಿ, ಅದೇ ಅಶ್ವಿನ್ ರನ್ನು ಅಣಕಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಪಿಎಲ್ ಬಿಟ್ಟರೆ ನಾವೆಲ್ಲಾ ಒಂದೇ ತಂಡದ ಸದಸ್ಯರು ಎಂಬುದನ್ನು ಈ ಆಟಗಾರರು ಮರೆಯಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ