ಟೊಮೆಟೋಗೆ ನಿಮ್ಮೂರಲ್ಲಿ ಎಷ್ಟು?: ಬೆಲೆ ಹೆಚ್ಚಳಕ್ಕೆ ನಿಜ ಕಾರಣವೇನು?

ಬುಧವಾರ, 28 ಜೂನ್ 2023 (09:36 IST)
Photo Courtesy: Instagram

ಬೆಂಗಳೂರು: ಒಂದು ಕಾಲದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿ ಜನ ಕಂಗಾಲಾಗಿದ್ದು ಆಯ್ತು. ಇದೀಗ ಟೊಮೆಟೋ ಸರದಿ. ಟೊಮೆಟೋ ಬೆಲೆ ಈಗ ಮಾರುಕಟ್ಟೆಯಲ್ಲಿ 100 ರೂ. ದಾಟಿದೆ.

ದೇಶದಾದ್ಯಂತ 100 ರ ಆಸುಪಾಸಿನಲ್ಲಿದೆ ಟೊಮೆಟೊ ಬೆಲೆ. ಹೀಗಿರುವಾಗ ಟೊಮೆಟೋ ಕೊಳ್ಳಲು ಜನ ಹಿಂದೆ ಮುಂದೆ ನೋಡುವಂತಾಗಿದೆ. ಬೆಂಗಳೂರಿನಲ್ಲಿ ಆಸುಪಾಸು ಕೆ.ಜಿ.ಗೆ 70-100 ರೂ.ಗಳಂತೆ ಟೊಮೆಟೊ ಮಾರಾಟವಾಗುತ್ತಿದೆ. ದರ ಹೆಚ್ಚಳವಾಗಿರುವುದರಿಂದ ಜನ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲವೆಡೆ ಎಂದಿನಂತೆ ಫ್ರೆಶ್ ಟೊಮೆಟೊ ದೊರೆಯುತ್ತಿಲ್ಲ ಎನ್ನುವುದು ಗ್ರಾಹಕರ ಅಳಲು.

ಕೆಲವೆಡೆ ವಿಪರೀತ ಮಳೆ, ಇನ್ನು ಕೆಲವೆಡೆ ವಿಪರೀತ ಬಿಸಿಲು. ಈ ರೀತಿಯ ಹವಾಮಾನ ವೈಪರೀತ್ಯದಿಂದಾಗಿ ಟೊಮೆಟೊ ಬೆಳೆ ಮೇಲೆ ಪರಿಣಾಮ ಬೀರಿದೆ. ಇದೇ ಕಾರಣಕ್ಕೆ ಟೊಮೆಟೊ ಬೆಲೆ ಗಗನಕ್ಕೇರಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ