ರಿಲಯನ್ಸ್‌ನಿಂದ ಹೊಸ 4ಜಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

ಶನಿವಾರ, 8 ಅಕ್ಟೋಬರ್ 2016 (20:02 IST)
ಸ್ಮಾರ್ಟ್‌ಪೋನ್‌ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ರಿಲಯನ್ಸ್ ಡಿಜಿಟಲ್, ಭಾರತದ ಮಾರುಕಟ್ಟೆಗೆ ಹೊಚ್ಚ ಹೊಸ ಆವೃತ್ತಿಯ ಎಲ್‌ಎಫ್‌ವೈ ಫ್ಲೇಮ್-7ಎಸ್ ಸ್ಮಾರ್ಟ್‌ಪೋನ್‌ ಬಿಡುಗಡೆಗೊಳಿಸಿದೆ. 
ಎಲ್‌ಎಫ್‌ವೈ ಫ್ಲೇಮ್-7ಎಸ್ ಸ್ಮಾರ್ಟ್‌ಪೋನ್‌ಗಳು 480x800 ಪಿಕ್ಸೆಲ್ಸ್ ರೆಸಲ್ಯೂಶನ್ ಹಾಗೂ ಅಸಾಹಿ ಡ್ರಾಗೊಂಟ್ರೈಲ್ ಗ್ಲಾಸ್ ರಕ್ಷಣೆಯ 4 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1 ಜಿಬಿ ರ್ಯಾಮ್, 1.5 GHz ಕ್ವಾಡ್-ಕೋರ್ ಸ್ಪೇಡ್ಟ್ರಮ್ ಪ್ರೊಸೆಸರ್ ಹೊಂದಿದೆ. ಈ ಪೋನ್‌ಗಳು 8 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಜೊತೆಗೆ 32 ಜಿಬಿ ವಿಸ್ತರಣೆಯ ಸ್ಚೋರೇಜ್ ಸಾಮರ್ಥ್ಯ ಹೊಂದಿದೆ. 
 
ಈ ಹೊಸ ಆವೃತ್ತಿಯ ಪೋನ್‌ಗಳು ಶೂಟರ್ ಹಾಗೂ ಎಲ್ಇಡಿ ಫ್ಲಾಶ್ ಜೊತೆಗೆ 5 ಮೆಗಾ ಪಿಕ್ಸೆಲ್ಸ್ ಕ್ಯಾಮೆರಾ ರಿಯರ್ ಕ್ಯಾಮೆರಾ ಹಾಗೂ ವಿಜಿಎ 0.3 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 
 
ಎಲ್‌ಎಫ್‌ವೈ ಫ್ಲೇಮ್-7ಎಸ್ ಸ್ಮಾರ್ಟ್‌ಪೋನ್‌ಗಳು ಆಂಡ್ರಾಯ್ಡ್ 5.1 ಲಾಲಿಪಾಪ್ ಹಾಗೂ ಡ್ಯುಯಲ್ ಸಿಮ್ ವೈಶಿಷ್ಟ್ಯ ಹೊಂದಿದ್ದು, 1800 ಎಂಎಚ್‌ಝಡ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಈ ಪೋನ್‌ಗಳು 4ಜಿ ವಿಓಎಲ್‌ಟಿಇ, ವೈ-ಫೈ, ಬ್ಲೂಟೂತ್ ಹಾಗೂ 4.0 ಮೈಕ್ರೋ ಯುಎಸ್‌ಬಿ 2.0 ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ