ಏರ್ ಟೆಲ್ ನ ಫಾಸ್ಟೆಸ್ಟ್ ನೆಟ್ ವರ್ಕ್ ಜಾಹೀರಾತಿಗೆ ಜಿಯೋ ಆಕ್ಷೇಪ

ಸೋಮವಾರ, 7 ಆಗಸ್ಟ್ 2017 (10:19 IST)
ನವದೆಹಲಿ: ಟಿವಿಯಲ್ಲಿ ಏರ್ ಟೆಲ್ ಟೆಲಿಕಾಂ ಸಂಸ್ಥೆಯ ಭಾರತ ಅತೀ ವೇಗದ ನೆಟ್ ವರ್ಕ್ ಎಂಬ ಜಾಹೀರಾತು ನೀವು ನೋಡಿರಬಹುದು. ಆದರೆ ಅದಕ್ಕೆ ರಿಲಯನ್ಸ್ ಜಿಯೋ ತಕರಾರು ತೆಗೆದಿದೆ.


 
ಫೆಬ್ರವರಿಯಲ್ಲಿ ಏರ್ ಟೆಲ್ ಗೆ ಜನರ ಸಮೀಕ್ಷೆಯನ್ನು ಆಧರಿಸಿ ಓಕ್ಲಾ ಸ್ಪೀಡ್ ಟೆಸ್ಟ್ ಆಪ್ ಭಾರತದ ಅತೀ ಫಾಸ್ಟೆಸ್ಟ್ ನೆಟ್ ವರ್ಕ್ ಬಿರುದು ನೀಡಿತ್ತು. ಆದರೆ ಇದು ಖಾಸಗಿ ಆಪ್ ಸಂಸ್ಥೆ. ಇದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧೀನಕ್ಕೊಳಪಡುವುದಿಲ್ಲ.

ಹೀಗಾಗಿ ಏರ್ ಟೆಲ್ ಫಾಸ್ಟೆಸ್ಟ್ ನೆಟ್ ವರ್ಕ್ ಎಂದು ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಜಿಯೋ ಆರೋಪಿಸಿದೆ. ಈ ಹಿನ್ನಲೆಯಲ್ಲಿ ರಿಲಯನ್ಸ್ ಜಿಯೋ ಸಂಸ್ಥೆ ಏರ್ ಟೆಲ್ ವಿರುದ್ಧ ಜಾಹೀರಾತು ನಿಗಾ ಸಮಿತಿ (ಎಎಸ್ ಸಿಐ) ಗೆ ಏರ್ ಟೆಲ್ ಜಾಹೀರಾತಿನಲ್ಲಿ ಹೇಳುವ ‘ಅಧಿಕೃತ’ ಶಬ್ಧವನ್ನು ತೆಗೆದು ಹಾಕಬೇಕೆಂದು ದೂರು ನೀಡಿತ್ತು.

ಇದರ ನಂತರ ಎಎಸ್ ಸಿಐ  ಈ ಜಾಹೀರಾತನ್ನು ತೆಗೆದು ಹಾಕಲು ಏರ್ ಟೆಲ್ ಗೆ ಸೂಚಿಸಿತ್ತು. ಆದರೆ ಇದು ಮತ್ತೆ ಕಾಣಿಸಿಕೊಳ್ಳುತ್ತಿದೆ. ಇದರ ವಿರುದ್ಧ ಜಿಯೋ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಇದನ್ನು ನ್ಯಾಯಾಲಯ ಇದೆಲ್ಲಾ ಮಾರುಕಟ್ಟೆ ತಂತ್ರಗಳಷ್ಟೇ ಎಂದು ತಳ್ಳಿ ಹಾಕಿದೆ ಎನ್ನಲಾಗಿದೆ.

ಇದನ್ನೂ ಓದಿ.. ನಮಗೆ ಶಾಂತಿ ಬೇಕು ಆದರೆ ಭಾರತವೇ ಪ್ರತಿಕ್ರಿಯಿಸುತ್ತಿಲ್ಲ ಎಂದ ಪಾಕ್ ಸಚಿವ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ