30 ರೂ. ಗೆ ಮಾಸಿಕ 56 ಜಿಬಿ ಇಂಟರ್ನೆಟ್ ಒದಗಿಸಲಿರುವ ರಿಲಯನ್ಸ್!

ಗುರುವಾರ, 20 ಏಪ್ರಿಲ್ 2017 (09:21 IST)
ಮುಂಬೈ: ರಿಲಯನ್ಸ್ ಜಿಯೊ ಗ್ರಾಹಕರಿಗೆ ಸಂಸ್ಥೆ ಹೊಸದೊಂದು ಆಫರ್ ನೀಡಿದೆ. ಅದರಂತೆ ತನ್ನ ಗ್ರಾಹಕರಿಗೆ 309 ರೂ.ಗಳ ಧನ್ ದನಾ ಧನ್ ಆಫರ್ ಹಾಕಿಸಿಕೊಂಡರೆ, ಮಾಸಿಕ 2 ಜಿಬಿ ಬದಲು 56 ಜಿಬಿ ಫ್ರೀ ಡಾಟಾ ಒದಗಿಸಲಿದೆ.

 
ಆದರೆ ಅದಕ್ಕೊಂದು ಷರತ್ತು ವಿಧಿಸಿದೆ. ಈ ಆಫರ್ ಪಡೆಯಬೇಕಾದರೆ ನಿಮ್ಮ ಬಳಿ ಸ್ಯಾಮ್ ಸಂಗ್ ಸಂಸ್ಥೆ ಹೊಸದಾಗಿ ಬಿಡುಗಡೆ ಮಾಡಿರುವ 57,900 ರೂ. ಗಳ ಗ್ಯಾಲಕ್ಸಿ ಎಸ್8 ಮತ್ತು 64,900 ರೂ. ಮೊತ್ತದ ಗ್ಯಾಲಕ್ಸಿ ಎಸ್8+ ಮೊಬೈಲ್ ಸೆಟ್ ಹೊಂದಿರಬೇಕು.

ಇವೆರಡೂ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಜಂಟಿಯಾಗಿ ಇಂತಹದ್ದೊಂದು ಪ್ಲ್ಯಾನ್ ನೀಡುತ್ತಿವೆ. ಹೊಸ ಮೊಬೈಲ್ ಸೆಟ್ ಗಳಲ್ಲಿ ಹಲವು ಆಧುನಿಕ ಫೀಚರ್ ಗಳಿದ್ದು, ಬುಕಿಂಗ್ ಪ್ರಾರಂಭವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ