ಮ್ಯಾನ್ಯುಯಲ್ ಕಾರಿನ ಬೆಲೆ ರೂ.3.54 ಲಕ್ಷಗಳು, ಆಟೋಮೆಟಿಕ್ ಕಾರಿನ ಬೆಲೆ ರೂ.3.84 ಲಕ್ಷಗಳು (ಎಕ್ಸ್-ಶೋರೂಂ ದೆಹಲಿ) ಎಂದು ಕಂಪೆನಿ ನಿರ್ಧರಿಸಿದೆ. 1,000 ಸಿಸಿ ಸಾಮರ್ಥ್ಯ ಇರುವ ಈ ವಾಹನ ಎರಡು, ಮೂರು, ನಾಲ್ಕನೇ ಶ್ರೇಣಿ ನಗರಗಳ ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದು ರೆನೋ ಇಂಡಿಯಾ ಮುಖ್ಯಕಾರ್ಯ ನಿರ್ವಹಣಾಧಿಕಾರಿ (ಸಿಇಓ), ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸುಮಿತ್ ಸಾನೆ ತಿಳಿಸಿದ್ದಾರೆ.