2020ರ ವೇಳೆಗೆ ರೋಲ್ಸ್ ರಾಯ್ಸ್‌ನಿಂದ ಸ್ವಯಂಚಾಲಿತ ಹಡಗುಗಳಿಗೆ ಚಾಲನೆ

ಶುಕ್ರವಾರ, 1 ಜುಲೈ 2016 (16:44 IST)
ಜಾಗತಿಕ ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್ ಸ್ವಯಂಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದರಿಂದ ಉತ್ತೇಜನಗೊಂಡ ಐಷಾರಾಮಿ ಕಾರು ತಯಾರಕ ಸಂಸ್ಥೆ ರೋಲ್ಸ್ ರಾಯ್ಸ್ ಕೂಡಾ ಸ್ವಾಯತ್ತ ತಂತ್ರಾಂಶ ತಂತ್ರಜ್ಞಾನ ಹೊಂದಿರುವ ಸ್ವಯಂ ಚಾಲಿತ ಹಡಗುಗಳನ್ನು ಸಮುದ್ರಕ್ಕಿಳಿಸಲು ಚಿಂತನೆ ನಡೆಸಿದೆ.   
 
ಮುಂಬರುವ 2020 ವೇಳೆಗೆ ಸ್ವಯಂಚಾಲಿತ ಹಡಗುಗಳು ಸಮುದ್ರದಲ್ಲಿ ಚಾಲಕರಹಿತವಾಗಿ ಸಂಚರಿಸಲಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
 
ರೋಲ್ಸ್ ರಾಯ್ಸ್ ಕಂಪೆನಿಯ ಎಂಜಿನಿಯರ್‌ಗಳು ಕೆಲವು ಸಾಮಾನ್ಯ ಪ್ರಗತಿಯ ಪರಿಕಲ್ಪನೆ ಆಧಾರದ ಮೇಲೆ ಸ್ವಾಯತ್ತ ಮತ್ತು ದೂರನಿಯಂತ್ರಿತ ಸರಕು ಹಡಗುಗಳ ಅಭಿವೃದ್ಧಿ ಪಡಿಸುತ್ತಿದೆ. ಈ ಸ್ವಯಂ ಚಾಲಿತ ಹಡಗು ಚಾಲಕನಿಲ್ಲದೆಯೇ ಸಮುದ್ರದಲ್ಲಿ ಸಂಚರಿಸಲಿದೆ.
 
ಈ ಹೊಸ ವೈಶಿಷ್ಟ್ಯದ ಸ್ವಯಂ ಚಾಲಿತ ಹಡಗಿನ ಬಗ್ಗೆ ಯೂ-ಟ್ಯೂಬ್‌ನಲ್ಲಿ ವಿಡಿಯೋ ಲಭ್ಯವಿದೆ ಎಂದು ಇಂಗ್ಲೆಂಡ್ ಮೂಲದ ಇಂಜಿನಿಯರಿಂಗ್ ಕ್ಷೇತ್ರದ ದೈತ್ಯ ಸಂಸ್ಥೆ ರೋಲ್ಸ್ ರಾಯ್ಸ್ ತಿಳಿಸಿದೆ. 
 
ಸಂಸ್ಥೆಯು 2020 ರ ಸಾಲಿನಲ್ಲಿ ಸ್ವಯಂ ಚಾಲನೆ ಡ್ರೋನ್ ಹಡಗನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ