ಫಾರೆಕ್ಸ್:ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತ

ಮಂಗಳವಾರ, 21 ಜೂನ್ 2016 (16:14 IST)
ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್‌ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 10 ಪೈಸೆ ಕುಸಿತ ಕಂಡು 67.42 ರೂಪಾಯಿ ಮೌಲ್ಯಕ್ಕೆ ತಲುಪಿದೆ.
 
ಸಾಗರೋತ್ತರ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಳವಾದ ಪರಿಣಾಮ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡಿದೆ ಎಂದು ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.
 
ಸೋಮವಾರದ ವಹಿವಾಟಿನ ಮುಕ್ತಾಯಕ್ಕೆ ಆರ್‌ಬಿಐ ಗವರ್ನರ್ ಅವರು ಎರಡನೇಯ ಅವಧಿಗೆ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂದು ಕೈಗೊಂಡಿರುವ ಪರಿಣಾಮವಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 23 ಪೈಸೆ ಕುಸಿತ ಕಂಡು 67.31 ರೂಪಾಯಿ ತಲುಪಿತ್ತು. 
 
ಏತನ್ಮಧ್ಯೆ ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ 82.52 ಪಾಯಿಂಟ್‌ಗಳಷ್ಟು ಕುಸಿತು ಕಂಡು 26,784.40 ಅಂಕಗಳಿಗೆ ತಲುಪಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ