ಮೂರು ಕ್ಯಾಮರಾ ಸೆಟಪ್ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7..!!

ಗುರುವಾರ, 20 ಸೆಪ್ಟಂಬರ್ 2018 (18:00 IST)
ಸ್ಯಾಮ್‌ಸಂಗ್ ತನ್ನ ನೂತನ ಮಧ್ಯಮ-ದರದ ಮೊಬೈಲ್ ಗ್ಯಾಲಕ್ಸಿ ಎ7 ಅನ್ನು ದಕ್ಷಿಣ ಕೊರಿಯಾದಲ್ಲಿ ಲಾಂಚ್ ಮಾಡುತ್ತಿರುವುದನ್ನು ಘೋಷಿಸಿದೆ. ಸ್ಯಾಮ್‌ಸಂಗ್ ಬಿಡುಗಡೆ ಮಾಡುತ್ತಿರುವ ಮೂರು ರಿಯರ್ ಕ್ಯಾಮರಾ ಹೊಂದಿರುವ ಮೊದಲ ಫೋನ್ ಇದಾಗಿದೆ.

6 ಇಂಚಿನ ಪೂರ್ಣ ಎಚ್‌ಡಿ + ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇ, ಡಾಲ್ಬಿ ಅಟ್ಮೋಸ್ ಆಡಿಯೊ ತಂತ್ರಜ್ಞಾನ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 24-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾದಂತಹ ಉತ್ತಮ ಆಯ್ಕೆಗಳನ್ನು ಈ ಮೊಬೈಲ್ ಹೊಂದಿರುತ್ತದೆ. ಈ ವಾರದ ಆರಂಭದಲ್ಲಿ, ದಕ್ಷಿಣ ಕೊರಿಯಾದಲ್ಲಿ ಹೊಸ ಗ್ಯಾಲಕ್ಸಿ ಜೆ4+ ಮತ್ತು ಗ್ಯಾಲಕ್ಸಿ ಜೆ6+ ಅನ್ನು ಬಿಡುಗಡೆ ಮಾಡಿದ್ದು, ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.
 
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 (2018) ಲಭ್ಯತೆ ಮತ್ತು ಬೆಲೆ:
 
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ನ ಬೆಲೆಯನ್ನು ಇನ್ನೂ ಘೋಷಿಸಿಲ್ಲ. ಆದರೂ, ಆರಂಭದಲ್ಲಿ ಆಯ್ದ ಯುರೋಪಿಯನ್ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಈ ಫೋನ್ ಲಭ್ಯವಾಗಲಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ಭವಿಷ್ಯದಲ್ಲಿ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸುವ ಸಾಧ್ಯತೆಗಳಿವೆ.
 
ಇದಲ್ಲದೆ, ಅಕ್ಟೋಬರ್ 11 ರಂದು ಸ್ಯಾಮ್‌ಸಂಗ್ ತನ್ನ ಇನ್ನೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಇದು ಕಂಪನಿಯ ಮತ್ತು ಈ ಉದ್ಯಮದ ಮೊದಲ ಕ್ವಾಡ್ರುಪಲ್ ಕ್ಯಾಮರಾ ಸೆಟಪ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎ ಶ್ರೇಣಿಯದಾಗಿರಲಿದೆ ಎಂದು ತಿಳಿದುಬಂದಿದೆ.
 
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 (2018) ಗುಣಲಕ್ಷಣಗಳು:
 
ಡ್ಯುಯಲ್ ಸಿಮ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ಎಂಡ್ರೊಯ್ಡ್ 8.0 ಓರಿಯೊ ಆವೃತ್ತಿಯನ್ನು ರನ್ ಮಾಡುತ್ತದೆ. 6 ಇಂಚಿನ ಪೂರ್ಣ ಎಚ್‌ಡಿ + (1080x2280 ಪಿಕ್ಸೆಲ್‌ಗಳು) ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನೂ ಹೆಸರಿಸದ ಆಕ್ಟಾ-ಕೋರ್ SoC 2.2GHz ನಲ್ಲಿ ದೊರೆಯುತ್ತದೆ ಮತ್ತು 4GB/6GB RAM ಹಾಗೂ 64GB/128GB ಆಂತರಿಕ ಸಂಗ್ರಹಣೆಯನ್ನು ಒಳಗೊಂಡಿರುತ್ತದೆ. ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹವನ್ನು 512GB ವರೆಗೆ ವಿಸ್ತರಿಸಬಹುದಾಗಿದೆ.
 
ಕ್ಯಾಮರಾ ವಿಷಯದಲ್ಲಿ, ಗ್ಯಾಲಕ್ಸಿ ಎ7 (2018) ಹಿಂದೆ ಮೂರು ರಿಯರ್ ಕ್ಯಾಮರಾವನ್ನು ಹೊಂದಿದೆ. ಇದು 24-ಮೆಗಾಪಿಕ್ಸೆಲ್ ಆಟೋಫೋಕಸ್ ಸಂವೇದಕವನ್ನು ಹೊಂದಿರುತ್ತದೆ. ಮುಂಭಾಗದಲ್ಲಿ 24-ಮೆಗಾಪಿಕ್ಸಲ್‌ನ ಸೆಲ್ಫೀ ಫೋಕಸ್ ಇರುವ ಎಲ್‌ಇಡಿ ಫ್ಲ್ಯಾಷ್, ಸೆಲ್ಫೀ ಫೋಕಸ್ ಮತ್ತು ಪ್ರೋ ಲೈಟನಿಂಗ್ ಮೋಡ್ ಆಯ್ಕೆಗಳಿರುವ ಕ್ಯಾಮರಾವನ್ನು ಹೊಂದಿದೆ.
 
ಈ ಮೊಬೈಲ್ 3300mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದೆ ಹಾಗೂ 3.5mm ಹೆಡ್‌ಫೋನ್ ಅನ್ನು ಬೆಂಬಲಿಸುತ್ತದೆ. ಮೊಬೈಲ್ ಗಾತ್ರ 159.8x76.8x7.5mm ಇರಲಿದ್ದು ತೂಕ 168 ಗ್ರಾಂಗಳಿರಲಿದೆ. ಗ್ಯಾಲಕ್ಸಿ A7 (2018) ದಲ್ಲಿ ಸೆನ್ಸಾರ್‌ಗಳು ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ, RGB ಬೆಳಕಿನ ಸೆನ್ಸಾರ್ ಮತ್ತು ಒಂದು ಬದಿಯ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌‌ಗಳನ್ನು ಒಳಗೊಂಡಿದೆ.
 
"ಅವರು ಯಾರೇ ಆಗಿದ್ದರೂ ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಕುಟುಂಬದ ಎಲ್ಲ ಗ್ರಾಹಕರಿಗೆ ಅರ್ಥಪೂರ್ಣವಾದ ನಾವೀನ್ಯತೆಯನ್ನು ನೀಡುವಲ್ಲಿ ಬದ್ಧವಾಗಿದೆ. ಅದಕ್ಕಾಗಿಯೇ, ನಿಮಗೆ ಪ್ರತಿದಿನ ಅನುಕೂಲಕರ ಮತ್ತು ಅಸಾಧಾರಣವಾದ ರೀತಿಯಲ್ಲಿ ಸಹಾಯ ಮಾಡಲು ನಿರ್ಮಿಸಲಾದ ಪ್ರಾಯೋಗಿಕ ಆದರೆ ಶಕ್ತಿಯುತ ಸಾಧನವಾದ ಗ್ಯಾಲಕ್ಸಿ ಎ7 ಜೊತೆಗೆ ಎ ಸರಣಿಗೆ ನವೀನ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ." ಎಂದು ಸ್ಯಾಮ್‌ಸಂಗ್ ಎಲೆಕ್ಟ್ರೊನಿಕ್ಸ್‌ನ ಕಮ್ಯುನಿಕೇಷನ್ ವಿಭಾಗದ ಅಧ್ಯಕ್ಷ ಮತ್ತು ಸಿಇಒ ಡಿಜೆ ಕೊಹ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ