ತನ್ನ ರೂಮ್ ಮೇಟ್ ನ್ನು ಚೂರಿಯಿಂದ ಇರಿದು ಕೊಂದ ವ್ಯಕ್ತಿ. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

ಬುಧವಾರ, 12 ಸೆಪ್ಟಂಬರ್ 2018 (11:59 IST)
ದುಬೈ : ತನ್ನ ರೂಮ್ ಮೇಟ್ ಮೊಬೈಲ್ ಫೋನಿನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಿದ ಎಂಬ ಕ್ಷುಲ್ಲಕ ಕಾರಣದಿಂದ ವ್ಯಕ್ತಿಯೊಬ್ಬ ಆತನನ್ನು ಕೊಲೆ ಮಾಡಿದ ಘಟನೆ ದುಬೈನಲ್ಲಿ ನಡೆದಿದೆ.


ಸಂತ್ರಸ್ತನಿಗೆಂದು ಆಯೋಜಿಸಲಾಗಿದ್ದ ವಿದಾಯ ಪಾರ್ಟಿಯಲ್ಲಿ ಆತ ದೊಡ್ಡ ಧ್ವನಿಯಲ್ಲಿ ಫೋನಿನಲ್ಲಿ ಯಾರ ಜೊತೆಗೆ ಮಾತನಾಡುತ್ತಿರುವುದನ್ನು ಕಂಡು ತಾಳ್ಮೆ ಕಳೆದುಕೊಂಡ ಆರೋಪಿ ಹಾಸಿಗೆಯ ಅಡಿಯಲ್ಲಿದ್ದ ಚೂರಿಯನ್ನು ತೆಗೆದು ಆತನ ಹೊಟ್ಟೆಗೆ ಇರಿದಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಈ ಘಟನೆ ಮಾರ್ಚ್ 30ರಂದು ಅಲ್ ಖುವಾಸಿಸ್ ಎಂಬಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇತನಿಗೆ 37 ವರ್ಷ ವಯಸ್ಸಾಗಿದ್ದು, ದುಬೈನಲ್ಲಿ ಭಾರತೀಯ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದ ಎಂಬುದಾಗಿ ತಿಳಿದುಬಂದಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ದುಬೈ ನ್ಯಾಯಾಲಯ ಅಕ್ಟೋಬರ್ 7ಕ್ಕೆ ನಿಗದಿ ಪಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ