ಕೊರಿಯಾ ಮೂಲದ ಮೊಬೈಲ್ ತಯಾರಿ ಸಂಸ್ಥೆ ಸ್ಯಾಮ್‌ಸಂಗ್ ಎಸ್ 8ರ ವಿವರಗಳು ಬಹಿರಂಗವಾಗಿವೆ. ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 8ಗೆ ಸಂಬಂಧಿಸಿದ ವಿವರಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಈ ಸ್ಮಾರ್ಟ್‍ಫೋನ್ ವಿಶೇಷಗಳು, ಬೆಲೆ, ಬಿಡುಗಡೆ ದಿನಾಂಕ ಇನ್ನಿತರೆ ವಿವರಗಳು ಲೀಕ್ ಆಗಿವೆ.
ಸಾಮಾನ್ಯವಾಗಿ ಕಂಪೆನಿ ತನ್ನ ಉತ್ಪನ್ನಗಳ ಬಗ್ಗೆ ಗುಟ್ಟುಬಿಟ್ಟುಕೊಡಲ್ಲ. ಅದೇನಿದ್ದರು ಬಿಡುಗಡೆ ಬಳಿಕವಷ್ಟೇ ಎಲ್ಲವೂ ಗೊತ್ತಾಗುತ್ತದೆ. ಆದರೂ ಈ ಬಾರಿ ಪ್ರತಿಷ್ಠಿತ ಉತ್ಪನ್ನವಾಗಿರುವ ಗೆಲಾಕ್ಸಿ ಎಸ್ 8 ವಿವರಗಳು ಬಹಿರಂಗವಾಗಿವೆ. ಎರಡು ಮಾಡೆಲ್‌ಗಳಲ್ಲಿ ಮಾರ್ಚ್ 29ರಂದು ಗೆಲಾಕ್ಸಿ ಎಸ್ 8 ಬಿಡುಗಡೆಯಾಗುತ್ತಿದೆ. ಬೆಲೆ ಸುಮಾರು ರೂ.58,000 ಹಾಗೂ ರೂ.65,400 ಇರಲಿದೆ ಎನ್ನಲಾಗಿದೆ.
ಗೆಲಾಕ್ಸಿ ಎಸ್ 8 ವಿಶೇಷಗಳು (ಲೀಕ್ ಆಗಿರುವಂತೆ)
* 5.8 ಇಂಚಿನ ಸ್ಪರ್ಶ ಸಂವೇದಿ ಪರದೆ
* 835 ಸ್ನಾಪ್ ಡ್ರ್ಯಾಗನ್ ಪ್ರೋಸೆಸರ್
* 8 ಎಂಪಿ ಮುಂಬದಿ ಕ್ಯಾಮೆರಾ
* 4ಜಿಬಿ ರ‍್ಯಾಮ್, 64 ಜಿಬಿ ಆಂತರಿಕ ಮೆಮೊರಿ
* 256 ಜಿಬಿ ವಿಸ್ತರಿಸಿಕೊಳ್ಳಬಹುದಾದ ಮೆಮೊರಿ