ಬರಲಿದೆ ’ಬೀಸ್ಟ್’ ಮೋಡ್‌ನಲ್ಲಿ ಸ್ಯಾಂಸಂಗ್ ಎಸ್ 8

ಮಂಗಳವಾರ, 27 ಡಿಸೆಂಬರ್ 2016 (08:39 IST)
ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸ್ಯಾಂಸಂಗ್ ಫೆಬ್ರವರಿಯಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಎಸ್8 ಬಿಡುಗಡೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಆ ಸಮಯಕ್ಕೆ ಎಸ್8 ಬಿಡುಗಡೆ ಡೌಟು ಎನ್ನುತ್ತಿದ್ದಾರೆ. ನೋಟ್ 7 ಸ್ಮಾರ್ಟ್‍ಫೋನ್‌ ಬ್ಯಾಟರಿ ಸ್ಫೋಟಗೊಂಡಿದ್ದ ಹಿನ್ನೆಲೆಯಲ್ಲಿ ಗೆಲಾಕ್ಸಿ ಎಸ್8 ತಯಾರಿಕೆ ಮೇಲೆ ವಿಶೇಷ ಗಮನಹರಿಸಿದೆ.
 
ಫೋನ್‌ಗೆ ಸಂಬಂಧಿಸಿದ ಪ್ರತಿ ಅಂಶವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆಯಂತೆ. ಮುಖ್ಯವಾಗಿ ಬ್ಯಾಟರಿ ವಿಷಯದಲ್ಲಿ ಯಾವುದೇ ಸಮಸ್ಯೆ ಬರದಂತೆ ಎಲ್ಲಾ ಮುಂಜಾಗ್ರತೆಗಳನ್ನೂ ತೆಗೆದುಕೊಂಡಿದೆ ಎಂಬುದು ತಾಜಾ ಸಮಾಚಾರ. ಆದಕಾರಣ ಬಿಡುಗಡೆ ತಡವಾಗಲಿದೆಯಂತೆ. 
 
ಫೆಬ್ರವರಿ 27, 2017ರಿಂದ ಮಾರ್ಚ್ 2ರವರೆಗೂ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಡೆಯಲಿದೆ. ಆದರೆ ಸ್ಯಾಂಸಂಗ್ ಎಸ್8 ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುವ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತವೆ ಮೂಲಗಳು. ಹೊಸ ಫೋನ್‌ನಲ್ಲಿ ’ಬೀಸ್ಟ್’ ಮೋಡ್ ತರಲಿಲಿದ್ದಾರೆ. 
 
ಇದರ ವಿಶೇಷತೆ ಎಂದರೆ ಪ್ರೋಸೆಸರ್ ವೇಗ ಹೆಚ್ಚಾಗುವುದರೊಂದಿಗೆ, ಮೊಬೈಲ್ ಮೆಮೊರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಸ್8 ಮೊಬೈಲ್ 8 ಜಿಬಿ ರ್ಯಾಮ್ ಇದ್ದು, ಡ್ಯುಯಲ್ ಕ್ಯಾಮೆರಾ ವೈಶಿಷ್ಟತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಇದು ಆಂಡ್ರಾಯ್ಡ್ ನೂಗಟ್ ಓಎಸ್‌ನೊಂದಿಗೆ ಕೆಲಸ ಮಾಡಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ