ಮುಂಬೈ: ಕಳೆದ ಒಂದು ವಾರದಿಂದ ತೀವ್ರ ಕುಸಿತದಲ್ಲಿದ್ದ ಷೇರು ಮಾರುಕಟ್ಟೆ ಇಂದು ಕೊಂಚ ಚೇತರಿಕೆ ಕಂಡುಬಂದಿದ್ದು ಹೂಡಿಕೆದಾರರಲ್ಲಿ ಕೊಂಚ ನೆಮ್ಮದಿ ಮೂಡಿದೆ. ಇದು ಸಂಕ್ರಾಂತಿ ಗುಡ್ ನ್ಯೂಸ್ ಎಂದೇ ಹೇಳಬಹುದು.
ಷೇರು ಮಾರುಕಟ್ಟೆ ನಿನ್ನೆ ದಾಖಲೆಯ ಪ್ರಮಾಣಕ್ಕೆ ಕುಸಿತ ಕಂಡಿತ್ತು. ಇದರಿಂದ ಹೂಡಿಕೆದಾರರು ಭಾರೀ ನಷ್ಟ ಅನುಭವಿಸಿದ್ದರು. ಕಳೆದ ಒಂದು ವಾರದಿಂದ ಇದೇ ಪರಿಸ್ಥಿತಿಯಿತ್ತು. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದವರು ಕಂಗಾಲಾಗಿದ್ದರು.
ಆದರೆ ಇಂದು ಸಂಕ್ರಾಂತಿ ದಿನವೇ ಕೊಂಚ ಚೇತರಿಕೆ ಕಂಡುಬಂದಿದೆ. ಇಂದು ಬೆಳಗಿನ ಅವಧಿಯಲ್ಲಿ ಸೆನ್ಸೆಕ್ಸ್ 436.46 ಪಾಯಿಂಟ್ ಗಳಷ್ಟು ಏರಿಕೆಯಲ್ಲಿದ್ದರೆ ನಿಫ್ಟಿ 50 149.60 ಪಾಯಿಂಟ್ ಗಳಷ್ಟು ಏರಿಕೆಯಲ್ಲಿದೆ. ನಿಫ್ಟಿ ಬ್ಯಾಂಕ್ 666.35 ಪಾಯಿಂಟ್, ನಿಫ್ಟಿ ಮಿಡ್ ಕ್ಯಾಪ್ 1,135.9 ಪಾಯಿಂಟ್ ಏರಿಕೆಯಲ್ಲಿದೆ.
ನಿನ್ನೆಗೆ ಹೋಲಿಸಿದರೆ ಇಂದು ಚೇತರಿಕೆಯತ್ತ ಸಾಗುತ್ತಿದೆ ಎಂದೇ ಹೇಳಬಹುದು. ಈ ಟ್ರೆಂಡ್ ಮುಂದುವರಿದು ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆ ಮತ್ತೆ ಮೊದಲಿನ ಸ್ಥಿತಿಗೆ ಬರಬಹುದು ಎಂಬ ವಿಶ್ವಾಸ ಹೂಡಿಕೆದಾರರದ್ದು.