Union Budget 2024 live: ಬಜೆಟ್ ಘೋಷಣೆ ಬೆನ್ನಲ್ಲೇ ಪಾತಾಳಕ್ಕಿಳಿದ ಷೇರು ಮಾರುಕಟ್ಟೆ

Krishnaveni K

ಮಂಗಳವಾರ, 23 ಜುಲೈ 2024 (12:47 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಘೋಷಣೆ ಮಾಡುತ್ತಿದ್ದಂತೇ ಷೇರು ಮಾರುಕಟ್ಟೆ ಪಾಯಿಂಟ್ ಪಾತಾಳಕ್ಕಿಳಿದಿದೆ. ಹೂಡಿಕೆದಾರರು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ.

ಇಂದು ಬೆಳಿಗ್ಗೆ ಪ್ರಿ ಮಾರ್ಕೆಟ್ ವರದಿ ಪ್ರಕಾರ ಷೇರು ಮಾರುಕಟ್ಟೆ ಉತ್ತಮ ಏರಿಕೆ ಕಾಣುವ ಲಕ್ಷಣಗಳಿತ್ತು. ನಿರ್ಮಲಾ ಬಜೆಟ್ ನಲ್ಲಿ ರೈಲ್ವೇ, ಕೃಷಿ ಉತ್ಪನ್ನಗಳು, ರಕ್ಷಣಾ ಉತ್ಪನ್ನಗಳಿಗೆ ಉತ್ತೇಜನ ಸಿಗುವ ನಿರೀಕ್ಷೆಯಿತ್ತು. ಹೀಗಾಗಿ ಈ ಉತ್ಪನ್ನಗಳ ಷೇರು ಜಿಗಿಯುವ ಲಕ್ಷಣವಿತ್ತು.

ಆದರೆ ಬಜೆಟ್ ಘೋಷಣೆ ಆರಂಭವಾಗುತ್ತಿದ್ದಂತೇ ಷೇರು ಮಾರುಕಟ್ಟೆ ಅಂಕ ಕುಸಿಯಲು ಆರಂಭವಾಗಿದೆ. ಸೆನ್ಸೆಕ್ಸ್ 1,078 ಪಾಯಿಂಟ್, ನಿಫ್ಟಿ 359 ಪಾಯಿಂಟ್ ಗಳಷ್ಟು ಇಳಿಕೆ ಕಂಡಿದೆ. ಇನ್ನು, ನಿಫ್ಟಿ ಬ್ಯಾಂಕ್ 629 ಪಾಯಿಂಟ್ ಇಳಿಕೆಯಾಗಿದ್ದರೆ ನಿಫ್ಟಿ ಮಿಡ್ ಕ್ಯಾಪ್ 1,567 ಪಾಯಿಂಟ್ ಗಳಷ್ಟು ಇಳಿಕೆಯಾಗಿದೆ.

ಬಜೆಟ್ ಮಂಡನೆ ಬಳಿಕ ಷೇರು ಮಾರುಕಟ್ಟೆಯಲ್ಲಿ ಏರಿಕೆ ನಿರೀಕ್ಷಿಸಿದ್ದ ಹೂಡಿಕೆದಾರರಿಗೆ ಇದು ಆಘಾತವಾಗಿದೆ. ನಿರೀಕ್ಷಿಸಿದ ವಲಯಗಳಿಗೆ ಅನುದಾನ ಸಿಗದೇ ಇರುವುದು, ನಿರೀಕ್ಷಿಸಿದ ಯೋಜನೆಗಳ ಘೋಷಣೆಯಾಗದೇ ಇರುವುದು ಈ ಬೆಳವಣಿಗೆಗೆ ಕಾರಣ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ