ಶಾಕಿಂಗ್! ರಿಲಯನ್ಸ್ ಜಿಯೋ ಫೋನ್ ಪ್ರಿ ಬುಕಿಂಗ್ ಸ್ಥಗಿತ!

ಭಾನುವಾರ, 27 ಆಗಸ್ಟ್ 2017 (08:48 IST)
ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಗೆ ಬುಕಿಂಗ್ ಮಾಡಬೇಕೆಂದು ಕಾಯುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಸದ್ಯದ ಮಟ್ಟಿಗೆ ಪ್ರಿ ಬುಕಿಂಗ್ ರದ್ದುಗೊಳಿಸಲಾಗಿದೆ.

 
ಪ್ರಿ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ 3 ಮಿಲಿಯನ್ ಮಂದಿ ಬುಕಿಂಗ್ ಮಾಡಿದ್ದರು. ಇದರಿಂದಾಗಿ ವೆಬ್ ಸೈಟ್ ಜ್ಯಾಮ್ ಆಗಿತ್ತು. ಹಾಗಾಗಿ ಎರರ್ ಸಂದೇಶ ತೋರಿಸುತ್ತಿತ್ತು.

ಇದೀಗ ಸಂಸ್ಥೆ ಸದ್ಯದ  ಮಟ್ಟಿಗೆ ಬುಕಿಂಗ್ ಸ್ಥಗಿತಗೊಳಿಸಲಾಗಿದ್ದು, ಮುಂದೆ ಯಾವಾಗ ಪ್ರಾರಂಭವಾಗುತ್ತದೆಂದು ತಿಳಿಸುವುದಾಗಿ ಸಂದೇಶ ನೀಡಿದೆ. ಹೀಗಾಗಿ ಬುಕಿಂಗ್ ಮಾಡಬೇಕೆಂದು ಆಸೆ ಪಟ್ಟಿದ್ದ ಗ್ರಾಹಕರಿಗೆ ಸದ್ಯದ ಮಟ್ಟಿಗೆ ನಿರಾಸೆ ಕಾಡಿದೆ.

ಇದನ್ನೂ ಓದಿ.. ಪಾಕಿಸ್ತಾನಕ್ಕೆ ಬನ್ನಿ! ಟೀಂ ಇಂಡಿಯಾ ಆಟಗಾರರಿಗೆ ಆಫರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ