ನವದೆಹಲಿ: ಹಳೆಯ ಆಂಡ್ರಾಯ್ಡ್, ಐಓಎಸ್, ಸಿಂಬಿಯನ್ ಓಎಸ್ ಆಧಾರಿತ ಸ್ಮಾರ್ಟ್ ಫೋನ್‍ಗಳಲ್ಲಿ ವಾಟ್ಸಪ್ ಬಳಸುವವರು ಕೂಡಲೇ ಹೊಸ ಸ್ಮಾರ್ಟ್ ಫೋನ ಖರೀದಿಸುವುದು ಒಳಿತು. ಈ ಮೇಲಿನ ಓಎಸ್ ಸಾಫ್ಟವೇರ್ ಹೊಂದಿರುವ ಹಳೆಯ ಫೋನ್ ಗಳಲ್ಲಿ ವಿಶ್ವದ ನಂಬರ್ ಒನ್ ಮೆಸೇಂಜಿಗ್ ಅಪ್ಲಿಕೇಶನ್ ವಾಟ್ಸಪ್ ಡಿಸೆಂಬರ್ 31ರ ವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.
ನಂತರ ವಾಟ್ಸಪ್ ಈ ಹಳೆಯ ಸ್ಮಾರ್ಟ್ ಫೋನ್ ಗಳಿಗೆ ಅಪ್‍ಗ್ರೇಡ್ ಕೊಡುವುದಿಲ್ಲ. ವಾಟ್ಸಪ್ ತನ್ನ ಬ್ಲಾಗ್‍ನಲ್ಲಿ ಈ ವಿಷಯ ತಿಳಿಸಿದ್ದು, ಗಡುವು ಅಂತ್ಯವಾಗುವುದರೊಳಗೆ ಬಳಕೆದಾರರು ಅಪ್ ಗ್ರೇಡ್ ಓಎಸ್ ಅವೃತ್ತಿ ಹೊಂದಿರುವ ಫೋನ್‍ಗಳನ್ನು ಖರೀಸುವುದು ಉತ್ತಮ.