ಶೀಘ್ರದಲ್ಲೇ ರಸ್ತೆ ಬದಿ ವ್ಯಾಪಾರಿಗಳಿಗೆ ಇ-ವ್ಯಾಲೆಟ್

ಭಾನುವಾರ, 18 ಡಿಸೆಂಬರ್ 2016 (06:36 IST)
ಸಣ್ಣಪುಟ್ಟ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳಿಗೆ ಶೀಘ್ರದಲ್ಲೇ ಇ-ವ್ಯಾಲೆಟ್ ಮೂಲಕ ಹಣ ಪಾವತಿಸುವ ಅವಕಾಶ ಸಿಗಲಿದೆ. ಇ-ವ್ಯಾಲೆಟ್, ಆನ್‍ಲೈನ್ ಮೂಲಕ ಪಾವತಿ ಮಾಡುವ ಬಗ್ಗೆ ಬೀದಿ ವ್ಯಾಪಾರಿಗಳಲ್ಲಿ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಏರ್ಪಡಿಸಲಿದ್ದಾರೆ.
 
ಸುಮಾರು 25 ರಾಜ್ಯಗಳಲ್ಲಿನ 10 ಲಕ್ಷ ಮಂದಿ ಬೀದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ವಿಶೇಷ ಶಿಕ್ಷಣ ಕೊಡಲಿದ್ದಾರೆ. ನಗದು ರಹಿತ ವ್ಯವಹಾರಕ್ಕಾಗಿ ಭಾರತದ ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಸಂಘ ಈ ಮೇರೆಗೆ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. 
 
ನೋಟು ರದ್ದುಪಡಿಸಿದ ಕಾರಣ ಬೀದಿ ವ್ಯಾಪಾರಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದು, ಅದರ ಪ್ರಭಾವ ಜೀವನಾಧರ ಮೇಲೆ ಬೀಳುತ್ತಿದೆ ಎಂದು ಸಂಘದ ವ್ಯವಸ್ಥಾಪಕ ಅರಬಿಂದ್ ಸಿಂಗ್ ಹೇಳಿದ್ದಾರೆ. ನೋಟು ರದ್ದಿನಿಂದ ದೇಶದಾದ್ಯಂತ ಶೇ. 70ರಷ್ಟು ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಕಳೆದುಕೊಂಡಿದ್ದಾರೆಂದು, ಹಾಗಾಗಿ ಈ ವ್ಯವಸ್ಥೆ ಮಾಡುತ್ತಿರುವುದಾಗಿ ತಿಳಿಸಿದ್ದಾರೀ. 
 
ದೇಶ್ ಕೆ ಲಿಯೆ, ದೇಶ್ ಕಾ ವ್ಯಾಲೆಟ್ ಎಂಬ ಘೋಷಣೆಯೊಂದಿಗೆ ಇ-ವ್ಯಾಲೆಟ್‌ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಿರುವುದಾಗಿ ಮೊಬಿ ಕ್ವಿಕ್ ಸಹ ವ್ಯವಸ್ಥಾಪಕ ಉಪಾಸನ ತಿಳಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ 10 ಲಕ್ಷ ಮಂದಿಗೆ ಇದರ ಬಗ್ಗೆ ಶಿಕ್ಷಣ ನೀಡುವುದಾಗಿ ಆಶಾಭಾವ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ