ಮಗನ ಇನ್ನೊಂದು ಸಂಬಂಧ ತಿಳಿಯುತ್ತಿದ್ದ ಹಾಗೇ RJDಯಿಂದ ಉಚ್ಛಾಟಿಸಿದ ಲಾಲು

Sampriya

ಭಾನುವಾರ, 25 ಮೇ 2025 (17:26 IST)
Photo Credit X
ನವದೆಹಲಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್‌ ಅವರನ್ನು ಆರ್‌ಜೆಡಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ 12 ವರ್ಷಗಳ ಸುದೀರ್ಘ ಸಂಬಂಧವನ್ನು ಪೋಸ್ಟ್ ಮಾಡಿದ್ದರು. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಭಾರೀ ಟೀಕೆ ವ್ಯಕ್ತವಾಗುತ್ತಿದ್ದ ಹಾಗೇ ಪ್ರತಿಕ್ರಿಯಿಸಿದ ತೇಜಕ್ ಅವರು ತನ್ನ ಖಾತೆಯನ್ನು ಕ್ಯಾಕ್ ಮಾಡಲಾಗಿದೆ ಎಂದರು.

ಹೇಳಿಕೆ ಮರುದಿನ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಭಾನುವಾರ ತಮ್ಮ ಹಿರಿಯ ಮಗನನ್ನು ಪಕ್ಷದಿಂದ ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದ್ದಾರೆ. ಅದಲ್ಲದೆ  ವೈಯಕ್ತಿಕ ಜೀವನದಲ್ಲಿ ಕುಟುಂಬದ ಮೌಲ್ಯಗಳು ಮತ್ತು ಸಂಪ್ರದಾಯಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

"ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟವನ್ನು ದುರ್ಬಲಗೊಳಿಸುತ್ತದೆ. ನನ್ನ ಹಿರಿಯ ಮಗನ ಕ್ರಮಗಳು, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆಯು ನಮ್ಮ ಕುಟುಂಬದ ತತ್ವಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ, ಈ ಪರಿಸ್ಥಿತಿಯಲ್ಲಿ, ನಾನು ಅವರನ್ನು ಪಕ್ಷದಿಂದ ಮತ್ತು ಕುಟುಂಬದಿಂದ ತೆಗೆದುಹಾಕುತ್ತಿದ್ದೇನೆ ಎಂದು ಲಾಲು ಹೇಲಿದರು.

"ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದು ಸರಿ ಅಥವಾ ತಪ್ಪು ಎಂದು ನಿರ್ಣಯಿಸಲು ಸಮರ್ಥರಾಗಿದ್ದಾರೆ. ಅವರೊಂದಿಗೆ ಬೆರೆಯಲು ಆಯ್ಕೆ ಮಾಡುವವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾನು ಯಾವಾಗಲೂ ಸಾರ್ವಜನಿಕ ಜೀವನದಲ್ಲಿ ಹೊಣೆಗಾರಿಕೆಯನ್ನು ಬೆಂಬಲಿಸುತ್ತೇನೆ ಮತ್ತು ನಮ್ಮ ಕುಟುಂಬದ ಆಜ್ಞಾಧಾರಕ ಸದಸ್ಯರು ಈ ತತ್ವವನ್ನು ಎತ್ತಿಹಿಡಿದಿದ್ದಾರೆ" ಎಂದು ಅವರು ಹೇಳಿದರು.

ತೇಜ್ ಪ್ರತಾಪ್ ಅವರು ಫೇಸ್‌ಬುಕ್‌ನಲ್ಲಿ ಮಹಿಳೆಯೊಂದಿಗಿನ ಫೋಟೋವನ್ನು ಹಂಚಿಕೊಂಡ ಒಂದು ದಿನದ ನಂತರ ಮತ್ತು ಅವರು 12 ವರ್ಷಗಳಿಂದ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ