ಬಿ.ಎಸ್‌.ಎನ್‌.ಎಲ್‌ ಹಾಗೂ ಎಂ.ಟಿ.ಎನ್‌.ಎಲ್‌ ಕಂಪೆನಿಗಳ ವಿಲೀನಕ್ಕೆ ಮುಂದಾದ ಟೆಲಿಕಾಂ ಇಲಾಖೆ

ಗುರುವಾರ, 1 ಆಗಸ್ಟ್ 2019 (09:08 IST)
ನವದೆಹಲಿ : ಟೆಲಿಕಾಂ ಕಂಪೆನಿಗಳಾದ ಐಡಿಯಾ ಹಾಗೂ ವೊಡಾಫೋನ್ ವಿಲೀನಗೊಂಡು ಇದೀಗ ಗ್ರಾಹಕರಿಗೆ  ಉತ್ತಮ ಆಫರ್ ಗಳನ್ನು ನೀಡುತ್ತಿದೆ. ಅದೇರೀತಿ ಇದೀಗ ಸರ್ಕಾರಿ ಸ್ವಾಮ್ಯದ ಬಿ.ಎಸ್‌.ಎನ್‌.ಎಲ್‌ ಹಾಗೂ ಎಂ.ಟಿ.ಎನ್‌.ಎಲ್‌ ಕಂಪನಿಗಳನ್ನು ವಿಲೀನಗೊಳಿಸಲು ದೂರಸಂಪರ್ಕ ಇಲಾಖೆಯು ನಿರ್ಧರಿಸಿದೆ ಎಂಬುದಾಗಿ ತಿಳಿದುಬಂದಿದೆ.




ಎಂ.ಟಿ.ಎನ್‌.ಎಲ್‌, ದೆಹಲಿ ಮತ್ತು ಮುಂಬೈನಲ್ಲಿ ಸೇವೆ ನೀಡುತ್ತಿದೆ. ದೇಶದ ಉಳಿದ ಕಡೆಗಳಲ್ಲಿ ಬಿ.ಎಸ್‌.ಎನ್‌.ಎಲ್‌ ಕಾರ್ಯನಿರ್ವಹಿಸುತ್ತಿದೆ. ಆದರೆ ಸರ್ಕಾರಿ ಸ್ವಾಮ್ಯದ ಈ ಎರಡೂ ಕಂಪನಿಗಳ ನಷ್ಟದಲ್ಲಿರುವ ಕಾರಣ ಸಿಬ್ಬಂದಿಗೆ ವೇತನ ನೀಡಲು ಕಷ್ಟಪಡುತ್ತಿವೆ,


ಈ ಹಿನ್ನಲೆಯಲ್ಲಿ ಈ ಎರಡೂ ಕಂಪನಿಗಳ ಪುನಶ್ಚೇತನಗೊಳಿಸಲು ಅವೆರಡನ್ನು ವಿಲೀನಗೊಳಿಸಲು ದೂರಸಂಪರ್ಕ ಇಲಾಖೆಯು ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟ ಅಂತಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ