ಉದ್ದೀಪನಾ ಔಷಧಿ ಸೇವಿಸಿ ಸಿಕ್ಕಿಬಿದ್ದ ಯುವ ಸೆನ್ಸೇಷನ್ ಪೃಥ್ವಿ ಶಾ

ಬುಧವಾರ, 31 ಜುಲೈ 2019 (09:37 IST)
ಮುಂಬೈ: ಟೀಂ ಇಂಡಿಯಾದ ಭವಿಷ್ಯದ ಕ್ರಿಕೆಟಿಗ ಎಂದೇ ಬಿಂಬಿತವಾಗಿದ್ದ ಸೆನ್ಸೇಷನಲ್ ಕ್ರಿಕೆಟಿಗ ಪೃಥ್ವಿ ಶಾ ಉದ್ದೀಪನಾ ಔಷಧಿ ಪ್ರಕರಣದಲ್ಲಿ ಕ್ರಿಕೆಟ್ ನಿಂದ 8 ತಿಂಗಳ ನಿಷೇಧಕ್ಕೊಳಗಾಗಿದ್ದಾರೆ.


ಮುಂಬೈ ಪ್ರತಿಭೆ ಪೃಥ್ವಿ ಶಾ ಬ್ಯಾಟಿಂಗ್ ನ್ನು ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡುಲ್ಕರ್ ಗೆ ಹೋಲಿಸಲಾಗುತ್ತಿತ್ತು. ಆದರೆ ಈ ಪ್ರತಿಭಾವಂತ ಕ್ರಿಕೆಟಿಗ ನಿಷೇಧಿತ ಔಷಧಿ ಸೇವಿಸಿ ವಿಶ್ವ ಉದ್ದೀಪನಾ ಔಷಧಿ ನಿಗ್ರಹ ಸಂಸ್ಥೆ ನಾಡಾ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಇದರಿಂದಾಗಿ ಉದ್ದೀಪನಾ ಔಷಧಿ ಪ್ರಕರಣಗಳಲ್ಲಿ ನಿಷೇಧಕ್ಕೊಳಗಾದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕುಖ್ಯಾತಿಗೆ ಪಾತ್ರರಾದರು. ಕೆಮ್ಮಿನ ಸಿರಪ್ ಗಳಲ್ಲಿ ಬಳಸುವ ಟರ್ಬುಟಲೈನ್ ಎಂಬ ಔಷಧವನ್ನು ಪೃಥ್ವಿ ಸೇವಿಸಿದ್ದು ಸಾಬೀತಾಗಿದೆ. ಆದರೆ ಇದು ಉದ್ದೇಶಪೂರ್ವಕಾಗಿ ಸೇವನೆ ಮಾಡಿದ್ದಾರೆಯೇ ಎಂದು ತಿಳಿದುಬಂದಿಲ್ಲ.

ಮಾರ್ಚ್ ನಿಂದ ಅನ್ವಯವಾಗುವಂತೆ 8 ತಿಂಗಳ ಕಾಲ ನಿಷೇಧಕ್ಕೊಳಗಾಗಿರುವ ಪೃಥ್ವಿ ಶಾ ಶಿಕ್ಷೆ ನವೆಂಬರ್ ತಿಂಗಳಲ್ಲಿ ಕೊನೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ