ಮುಂದಿನ ದಿನಗಳಲ್ಲಿ ಎಟಿಎಂ ಕೇಂದ್ರಗಳಿರುವುದಿಲ್ಲವಂತೆ. ಯಾಕೆ ಗೊತ್ತಾ?

ಶುಕ್ರವಾರ, 17 ಮೇ 2019 (06:54 IST)
ನವದೆಹಲಿ : ಎಟಿಎಂ ಮೂಲಕ ಹಣದ  ವ್ಯವಹಾರ ಮಾಡುತ್ತಿರುವ ಗ್ರಾಹಕರಿಗೊಂದು ಕಹಿಸುದ್ದಿ, ಎಟಿಎಂ ಕೇಂದ್ರಗಳನ್ನು ಮುಚ್ಚಲು ಬ್ಯಾಂಕ್ ಗಳು ಮನಸ್ಸು ಮಾಡುತ್ತಿವೆ ಎನ್ನಲಾಗಿದೆ.




ಹೌದು. ಎಟಿಎಂ ಕೇಂದ್ರಗಳ ನಿರ್ವಹಣೆಗಾಗಿ ಸರ್ಕಾರ ಜಾರಿಗೆ ತಂದ ನಿಯಮಗಳಿಂದ ಬ್ಯಾಂಕ್ ಗಳಿಗೆ ಹೊರೆಯಾಗಿದ್ದು, ಎಟಿಎಂ ಕೇಂದ್ರಗಳ ನಿರ್ವಹಣೆಗೆ ಹೆಚ್ಚಿನ ವೆಚ್ಚವನ್ನು ಭರಿಸಬೇಕಿದೆ. ಇದರಿಂದ ಬ್ಯಾಂಕ್‌ ಗಳಿಗೆ ನಷ್ಟವಾಗುತ್ತದೆ ಎನ್ನಲಾಗಿದೆ.  ಹೀಗಾಗಿ ಎಟಿಎಂ ಕೇಂದ್ರಗಳನ್ನು ಮುಚ್ಚಲು  ಬ್ಯಾಂಕ್ ಗಳು ನಿರ್ಧಾರ ಮಾಡುತ್ತಿವೆ ಎನ್ನಲಾಗಿದೆ.


ಅಲ್ಲದೇ ಸರಕಾರವು ನಗದುರಹಿತ ವ್ಯವಸ್ಥೆ ಉತ್ತೇಜಿಸಲು ನಾನಾ ಕ್ರಮ ಕೈಗೊಳ್ಳುತ್ತಿದ್ದರೂ ಕೂಡ ಬಹುತೇಕ ಮಂದಿ ನಗದು ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ