ಯುಎಇಗೆ ಆಗಮಿಸುವ ಪ್ರವಾಸಿಗರಿಗೆ ಇವುಗಳು ಫ್ರೀಯಾಗಿ ಸಿಗಲಿದೆಯಂತೆ

ಶನಿವಾರ, 6 ಜುಲೈ 2019 (11:35 IST)
ದುಬೈ : ಯಾವುದೇ ಒಂದು ಮೊಬೈಲ್, ಸಿಮ್ ಕಾರ್ಡ್ ಗಳನ್ನು ಖರೀದಿಸಲು ದಾಖಲೆಗಳನ್ನು  ಕೊಡಲೇಬೇಕು. ಆದರೆ ಪ್ರವಾಸಿಗರಿಗೆ  ಯಾವುದೇ ದಾಖಲೆಗಳನ್ನು ಕೇಳದೇ, ಹಣವು ಪಡೆಯದೇ ಉಚಿತವಾಗಿ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಗಳನ್ನು ಗಿಫ್ಟ್  ಆಗಿ  ನೀಡುವುದಾಗಿ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ ಅಬುಧಬಿಯಲ್ಲಿ ಘೋಷಣೆ ಮಾಡಿದೆ.ಈ ಸಿಮ್ ಕಾರ್ಡ್ ಗಳಲ್ಲಿ ಮೂರು ನಿಮಿಷಗಳ ಉಚಿತ ಅಂತರಾಷ್ಟ್ರೀಯ ಕರೆಗಳು, 20 ಜಿಬಿ ಡೇಟಾ ಹಾಗೂ ಮೆಸೇಜ್ ಸೌಲಭ್ಯ ಹೊಂದಿದ್ದು, ಯುಎಇಗೆ ಆಗಮಿಸುವ ಪ್ರವಾಸಿಗರಿಗೆ  ಪಾಸ್ ಪೋರ್ಟ್ ನಿಯಂತ್ರಣ ಅಧಿಕಾರಿಗಳು  ಸಿಮ್ ಕಾರ್ಡ್ ಮತ್ತು ಮೊಬೈಲ್ ಅನ್ನು ಕಾಣಿಕೆಯಾಗಿ ನಿಡಲಿದ್ದಾರಂತೆ.


ಈ ಸಿಮ್ ಒಂದು ತಿಂಗಳುಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ  ಒಂದು ವೇಳೆ ಪ್ರವಾಸಿಗರು ತಮ್ಮ ವೀಸಾ ಅವಧಿ ವಿಸ್ತರಣೆ ಮಾಡಿಕೊಂಡರೇ ಸಿಮ್ ವ್ಯಾಲಿಡಿಟಿಯೂ ವಿಸ್ತರಣೆಯಾಗಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ