ಅನಗತ್ಯ ಕರೆ, ಮೆಸೇಜ್ ನಿಂದ ಗ್ರಾಹಕರನ್ನು ಮುಕ್ತಗೊಳಿಸಲು ಟೆಲಿಕಾಂ ಸಂಸ್ಥೆಗಳು ಜಾರಿಗೆ ತರಲಿವೆ ಈ ತಂತ್ರಜ್ಞಾನ

ಶುಕ್ರವಾರ, 31 ಮೇ 2019 (06:54 IST)
ನವದೆಹಲಿ : ಮೊಬೈಲ್ ಫೋನ್ ಬಳಕೆದಾರರಿಗೆ ಅನಗತ್ಯ ಕರೆ ಹಾಗೂ ಮೆಸೇಜ್ ಗಳು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತಿದ್ದು, ಇದನ್ನು ತಪ್ಪಿಸಲು ಭಾರತದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಾದ ವೊಡಾಪೋನ್​, ಏರ್​ ಟೆಲ್​ ಮತ್ತು ಜಿಯೋ ಕಂಪೆನಿಗಳು ಬ್ಲಾಕ್​ ಚೈನ್​​ ತಂತ್ರಜ್ಞಾನವನ್ನು ಜಾರಿಗೆ ತರಲಿದೆ.




ಅದರಂತೆ ವೊಡಾಫೋನ್​​- ಐಡಿಯಾ ಟಾನ್ಲಾ ಸೊಲ್ಯೂಷನ್​ ಕಂಪನಿಯೊಂದಿಗೆ ಒಪ್ಪಿಗೆ ಮಾಡಿಕೊಂಡಿದೆ. ಹಾಗೇ ಜಿಯೋ ಕಂಪೆನಿ ಟೆಕ್​​​ ಮಹೀಂದ್ರಾ ಜೊತೆ ಕೈ ಜೋಡಿಸಿ ನೂತನ ತಂತ್ರಜ್ಞಾನವನ್ನು ಅಳವಡಿಸಲು ಯೋಜನೆ ಹಾಕಿಕೊಂಡಿದೆ. ಏರ್​ಟೆಲ್​​ ಕಂಪನಿ​ ಐಬಿಎಮ್ ಜೊತೆ ಸೇರಿಕೊಂಡಿದೆ.


ಈ ವ್ಯವಸ್ಥೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ನಿಯಮಾವಳಿಗೆ ಅನುಗುಣವಾಗಿ ಜಾರಿಯಾಗಲಿದ್ದು,  ವೊಡಾಫೋನ್​ ಮತ್ತು ಐಡಿಯಾ, ಜಿಯೋ  ಹಾಗೂ ಏರ್​​ಟೆಲ್ ಬಳಕೆದಾರರಿಗೆ ಈ ಸೌಲಭ್ಯ ಲಭಿಸಲಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ