ಪ್ರತಿಯೊಬ್ಬರಿಗೂ ದೀರ್ಘಾಯುಷ್ಯ ಬೇಕು ಎಂಬ ಆಸೆಯಿರುತ್ತದೆ. ನಿಮಗೆ ಸುದೀರ್ಘ ಕಾಲ ಆರೋಗ್ಯವಂತರಾಗಿ ಬದುಕಬೇಕು ಎಂದರೆ ಇದೊಂದು ಕೆಲಸ ಮಾಡಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ ದೇವಿಪ್ರಸಾದ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇತ್ತೀಚೆಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಹೃದಯಾಘಾತ. ಬಹುತೇಕ ಚಿಕ್ಕ ವಯಸ್ಸಿನವರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಹಲವರಿಗೆ ಯಕ್ಷ ಪರಶ್ನೆಯಾಗಿದೆ. ಜೊತೆಗೆ ಒಂದು ರೀತಿಯ ಭಯವೂ ಸೃಷ್ಟಿಯಾಗಿದೆ.
ಹೃದಯಾಘಾತದಿಂದ ಅಕಾಲಿಕವಾಗಿ ಮರಣ ಹೊಂದಿದ ಎಷ್ಟೋ ಜನರ ಉದಾಹರಣೆ ನಮ್ಮ ಮುಂದಿದೆ. ಹೃದಯಾಘಾತವನ್ನು ತಪ್ಪಿಸಬೇಕು, ಆರೋಗ್ಯವಾಗಿ ಸುದೀರ್ಘ ಜೀವನ ನಡೆಸಬೇಕು ಎಂದರೆ ಇದೊಂದು ಕೆಲಸವನ್ನು ಮಾಡಬೇಕು ಎಂದು ಡಾ ದೇವಿಪ್ರಸಾದ್ ಶೆಟ್ಟಿ ಹೇಳಿದ್ದರು. ಅವರು ಹೇಳಿದ ಮೂರು ಅಂಶಗಳು ಇಲ್ಲಿದೆ ನೋದಿ.
ಮೊದಲನೆಯದಾಗಿ ಬೊಜ್ಜು ಎಲ್ಲದಕ್ಕೂ ಮೂಲ ಕಾರಣ. ಹೀಗಾಗಿ ಆರೋಗ್ಯಕರ ದೇಹ ತೂಕ ಹೊಂದುವುದರತ್ತ ಮೊದಲು ಗಮನಹರಿಸಬೇಕು. ಎರಡನೆಯದ್ದಾಗಿ ಪ್ರತಿನಿತ್ಯ 8000, 10000 ಸ್ಟೆಪ್ಸ್ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮೂರನೆಯದ್ದಾಗಿ ನಮ್ಮನ್ನು ಕಾಪಾಡುವ ಯಾವುದೋ ಒಂದು ಶಕ್ತಿ ಇದೆ ಎಂಬ ಸ್ಪಿರಿಚ್ಯುವಲ್ ಭಾವನೆ ನಮ್ಮಲ್ಲಿರಬೇಕು. ಇದು ಮೂರಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.