ಸ್ಮಾರ್ಟ್ ಫೋನ್ ಹೀಟ್ ಆಗ್ತಿದೆಯಾ.... ಕೂಲಾಗಿಸೋಕೆ ಇಲ್ಲಿದೆ ಟಿಪ್ಸ್..

ಶನಿವಾರ, 11 ಫೆಬ್ರವರಿ 2017 (16:41 IST)

ನಿಮ್ಮ ಸ್ಮಾರ್ಟ್ ಫೋನ್ ಹೀಟ್ ಆಗ್ತಿದೆಯಾ.. ಎಲ್ಲಿ, ಯಾವಾಗ ಬ್ಲಾಸ್ಟ್ ಆಗುತ್ತೋ ಅನ್ನೋ ಆತಂಕದಲ್ಲಿದ್ದೀರಾ. ನಿಮ್ಮ ಸ್ಮಾರ್ಟ್ ಫೋನ್ ಕೂಲಾಗಿರಬೇಕು.. ಹೀಟ್ ನಿಂದ ಕಿರಿಕಿರಿ ಅನ್ನಿಸಬಾರದು ಅಂದ್ರೆ ಈ ಕೆಳಗಿನ ಕೆಲ ಅಂಶಗಳನ್ನ ಫಾಲೋ ಮಾಡಿ ಸಾಕು. 
 


1. ಮೊಬೈಲ್ ಫೋನ್ ಸುರಕ್ಷತೆಗೆ ಹಾಕಿರೋ ಕವರನ್ನು ಮೊದಲು ರಿಮೂವ್ ಮಾಡಿ. ಯಾಕಂದ್ರೆ. ಸೆಲ್ ಫೋನ್ ಬಿಸಿಯಾದಾಗ ಫೋನ್‌ಗೆ ಅಳವಡಿಸಿದ ಕವರ್ ಬಿಸಿ ಆರುವಂತೆ ಮಾಡದೇ ಬಿಸಿಯನ್ನ ದೀರ್ಘ ಕಾಲ ಇರುವಂತೆ ಮಾಡುತ್ತದೆ. ಇದರಿಂದ ಬ್ಯಾಟರಿ ಹೀಟ್ ಆಗಿ ಬ್ಲಾಸ್ಟ್ ಆಗುವ ಸಂಭವವಿದೆ. 

 

2. ಕೇವಲ ಕವರ್ ಅಷ್ಟೆ ಅಲ್ಲ, ಚಾರ್ಜಿಂಗ್ ವೈಯರ್ ಕೂಡಾ ಸೆಲ್ಫೋನ್ ಬಿಸಿಯಾಗಲು ಕಾರಣವಾಗುತ್ತೆ. ಇತ್ತೀಚಿನ ದಿನಗಳಲ್ಲಿ ನೂರಾರು ಡೂಪ್ಲಿಕೇಟ್ ಕಂಪನಿಯ ಚಾರ್ಜಿಂಗ್ ವೈಯರ್‌ಗಳು ಬಂದಿವೆ. ನೀವು ಉತ್ತಮ ಕಂಪನಿಯ ಚಾರ್ಜರ್ ಬಳಸಿ.

 

3. ಚಾರ್ಜಿಂಗ್ ಅಂದ ತಕ್ಷಣ ಇನ್ನೊಂದು ವಿಷ್ಯ ನೆನಪಿಡಿ. ಚಾರ್ಜರ್ಗೆ ಸ್ವಿಚ್ ಬೋರ್ಡ್ಗೆ ಹಾಕುವ ಪೀನ್ ಸ್ವಲ್ಪ ಹಾರ್ಡ್ ಇರುವುದನ್ನು ಖರೀದಿಸಿ. ಇದರಿಂದ ಚಾಜಿಂಗ್ ಪಿನ್ ಸ್ವಿಚ್ ಬೋರ್ಡ್ಗೆ ಬಿಗಿಯಾಗಿ ಕೂರುತ್ತೆ.

 

3.ರಾತ್ರಿ ಇಡಿ ಸ್ಮಾರ್ಟ್ ಫೋನ್ ಚಾರ್ಜ್ ಇಡುವ ರೂಢಿಯನ್ನು ಮೊದಲು ತಪ್ಪಿಸಿಕೊಳ್ಳಿ. ಇದು ಸೆಲ್ಫೋನ್ ಹೀಟ್ ಆಗಿ ಬ್ಲಾಸ್ಟ್ ಆಗುವ ಸಂಭವವಿರುತ್ತದೆ. ಜೊತೆಗೆ ಸೆಲ್ಫೋನ್  ಚಾರ್ಜ್ ಆಗಲು ಮಿನಿಮಮ್ 2 ಗಂಟೆ ಸಾಕು. ಆದರೆ ರಾತ್ರಿ ಇಡಿ ಆರೆಳು ಗಂಟೆ  ಚಾರ್ಜ್ ಹಾಕಿದ್ರೆ, ಸೆಲ್ಫೋನ್ ಬ್ಯಾಟರಿ ಏನಾಗ್ಬೇಡ. ಸೋ ಓವರ್ನೈಟ್ ಚಾರ್ಜಿಂಗ್ ಬೇಡ.

 

4. ಯೆಸ್.. ಇದೀಗ ಎಲ್ಲ ಕೆಲಸಕ್ಕೂ ಒಂದೊಂದು ಆ್ಯಪ್ ಮೊಬೈಲ್ ನ ಪ್ಲೇ ಸ್ಟೋರಲ್ಲಿ ಸಿಕ್ಕು ಬಿಡುತ್ವೆ. ಸೋ ಇನ್ನುಮುಂದೆ ಅವಶ್ಯವೆನಿಸಿದ ಅಪ್ಲಿಕೇಶನ್  ಗಳನ್ನ ಮಾತ್ರ ಬಳಸಿ. ಜೊತೆಗೆ ಎಕ್ಸ್ಟ್ರಾ ಅನ್ನಿಸುವ ಅಪ್ಲಿಕೇಶನ್ ಗಳನ್ನು ಮುಲಾಜಿಲ್ಲದೇ ಡಿಲಿಟ್ ಮಾಡಿ. ಇದರಿಂದ ನಿಮ್ಮ ಸಮಯವೂ ವ್ಯರ್ಥ. ಜೊತೆಗೆ ಸೆಲ್ಫೋನ್ ಕೂಡಾ ಹೀಟ್ ಆಗುತ್ತೆ.

 

5. ಸೆಲ್ಫೋನ್ಗಳನ್ನು ಡೇ ಟೈಮಲ್ಲಿ ಅದರಲ್ಲೂ ಸೂರ್ಯನ ಬಿಸಿಲಿಗೆ ವಿರುದ್ಧವಾಗಿ ಹಿಡಿದು ಬಳಕೆ ಮಾಡದಿರಿ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಸೆಲ್ಫೋನ್ ಮೇಲೆ ಬೀಳುವುದರಿಂದ ಮೊಬೈಲ್ ಬೇಗನೆ ಕಾದುಬಿಡುತ್ತದೆ. 

 

6. ಸೆಲ್ಫೋನ್ ಯಾವ ಕಂಪನಿಯದ್ದಿರುತ್ತೋ ಅದೇ ಕಂಪನಿಯ ಬ್ಯಾಟರಿಗಳನ್ನು  ಕಡ್ಡಾಯವಾಗಿ ಬಳಸಿ. ಅಲ್ಲದೇ ಅದೇ ಕಂಪನಿಯ ಚಾರ್ಜ್ ರ್  ಇದ್ದರಂತೂ ಮತ್ತೂ ಒಳಿತು. ಇದರಿಂದ  ಸೆಲ್ಫೋನ್ ಬಿಸಿಯಾಗುವಿಕೆಯನ್ನು ಕಡಿಮೆ ಮಾಡಬಹುದು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ