ಟೊಮೆಟೊ ಖರೀದಿ ಸಹವಾಸವೇ ಬೇಡ ಅಂತಿದ್ದಾರೆ ಗ್ರಾಹಕರು

Krishnaveni K

ಗುರುವಾರ, 20 ಜೂನ್ 2024 (09:24 IST)
Photo Credit: Facebook
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಒಂದೊಂದೇ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಇದೀಗ ಟೊಮೆಟೋ ಬೆಲೆ ಕೇಳಿಯೇ ಗ್ರಾಹಕರು ಶಾಕ್ ಆಗುವ ಪರಿಸ್ಥಿತಿ ಬಂದಿದೆ.

ಒಮ್ಮೆ ಬಿರುಬೇಸಿಗೆ, ಇನ್ನೊಮ್ಮೆ ಅಕಾಲಿಕ ಮಳೆ ಇವೆರಡರ ಮಧ್ಯೆ ರಾಜ್ಯ ರಾಜಧಾನಿಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಕೆಲವು ದಿನಗಳ ಹಿಂದೆ ಬೀನ್ಸ್ ಬೆಲೆ ದಾಖಲೆಯ ಪ್ರಮಾಣಕ್ಕೆ ಏರಿಕೆಯಾಗಿತ್ತು. ಬಟಾಣಿಯೂ ಮುಟ್ಟುವ ಹಾಗೂ ಇಲ್ಲ ಎನ್ನುವ ಪರಿಸ್ಥಿತಿಯಿತ್ತು.

ಇದೀಗ ಟೊಮೆಟೋದ್ದೂ ಅದೇ ಕತೆಯಾಗಿದೆ. ಬೆಂಗಳೂರಿನಲ್ಲಿ ಟೊಮೆಟೊ ಬೆಲೆ 100 ರ ಗಡಿ ತಲುಪಿದ್ದು ಮುಂದಿನ ದಿನಗಳಲ್ಲಿ ಇನ್ನೂ ಇದು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದೇ ಟೊಮೆಟೊ ಬೆಳೆ ಸರಿಯಾಗಿ ಆಗಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಟೊಮೆಟೋ ಬೆಲೆ 100 ರ ಗಡಿ ತಲುಪಿದೆ.

ಇನ್ನೂ ಇದು ಏರಿಕೆಯಾಗುವ ಸಾಧ್ಯತೆಯಿದೆ. ಟೊಮೆಟೊ ಬೆಳೆ ಹಾನಿಯಾಗಿದ್ದು, ಇದೀಗ ಬೇರೆ ರಾಜ್ಯಗಳಿಂದ ಟೊಮೆಟೊ ತರಿಸಿಕೊಳ್ಳುವ ಪರಿಸ್ಥಿತಿಯಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿಯರಲಿದೆ. ಕೆಲವೊಮ್ಮೆ ಕೇಳುವವರಿಲ್ಲದೇ ರಸ್ತೆ ಸೇರುವ ಟೊಮೆಟೋಗೆ ಈಗ ಚಿನ್ನದ ಬೆಲೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ