ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರಿಗೆ ಸಂತದ ಸುದ್ದಿಯೊಂದು ಬಂದಿದೆ. ಇದೀಗ, ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನ್‌ನಿಂದ *325# ಡಯಲ್ ಮಾಡಿದಲ್ಲಿ ಇಂಟರ್‌ನೆಟ್ ಸಂಪರ್ಕ ಇಲ್ಲದೆಯೇ ತಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಫೇಸ್‌ಬುಕ್ ಬಳಕೆ ಮಾಡುವಂತಹ ಸೌಲಭ್ಯ ಪಡೆಯಬಹುದಾಗಿದೆ.
ಈ ವಿನೂತನ ಸೌಲಭ್ಯದ ಸಹಾಯದಿಂದ ಫೇಸ್‌ಬುಕ್ ಬಳಕೆದಾರರು ತಮ್ಮ ಸ್ಟೇಟಸ್‌ನ್ನು ಉಚಿತವಾಗಿ ಅಪ್‌ಡೇಟ್ ಮಾಡಬಹುದಾಗಿದೆ. ಆದರೆ, ನೋಟಿಫಿಕೇಷನ್ ನೋಡಲು ಹಾಗೂ ಹೊಸ ಸ್ನೇಹಿತರನ್ನು ಆಡ್ ಮಾಡಿಕೊಳ್ಳಲು ಪ್ರತಿದಿನದ ಸೇವೆಗಾಗಿ ಕೇವಲ 1 ರೂಪಾಯಿಯನ್ನು ಸಂದಾಯ ಮಾಡಬೇಕಾಗುತ್ತದೆ.
ಫೇಸ್‌ಬುಕ್ ಬಳಕೆದಾರರು ತಮ್ಮ ಸ್ಮಾರ್ಟ್‌ಪೋನ್‌ಗಳಲ್ಲಿ *325# ಡಿಯಲ್ ಮಾಡಿ, ತಮ್ಮ ಫೇಸ್‌ಬುಕ್ ಖಾತೆಯ ಯುಸರ್‌ನೇಮ್ ಹಾಗೂ ಪಾಸ್‌ವರ್ಡ್ ಭರ್ತಿ ಮಾಡಿದರೇ ಸಾಕು, ಉಚಿತವಾಗಿ ಫೇಸ್‌ಬುಕ್ ಖಾತೆ ಬಳಕೆ ಮಾಡಬಹುದಾಗಿದೆ.
ಈ ಹೊಸ ಪ್ರಯೋಗದಲ್ಲಿ ಯುಎಸ್‌ಎಸ್‌ಡಿ ಸೇವೆಯನ್ನು ಬಳಕೆದಾರ ಹ್ಯಾಂಡ್‌ಸೆಟ್‌ಗಳಿಗೆ ಮಾಹಿತಿಯನ್ನು ರವಾನಿಸಲು ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ಸೇವೆ ಕೇವಲ ಏರ್‌ಟೆಲ್, ಏರ್‌ಸೆಲ್, ಐಡಿಯಾ ಮತ್ತು ಡೊಕೊಮೊ ನೆಟ್‌ವರ್ಕ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲಿ ಎಲ್ಲ ದೈತ್ಯ ನೆಟ್‌ವರ್ಕ್‌ಗಳಲ್ಲಿ ಸೇವೆ ನೀಡಲು ಫೇಸ್‌ಬುಕ್ ಯೋಜನೆ ರೂಪಿಸುತ್ತಿದೆ.