ವೈರಸ್..ವೈರಸ್…! ನಿಮ್ಮ ಕಂಪ್ಯೂಟರ್ ಬಗ್ಗೆ ಎಚ್ಚರ!

ಬುಧವಾರ, 28 ಜೂನ್ 2017 (10:09 IST)
ನವದೆಹಲಿ: ಮತ್ತೆ ವಿಶ್ವದಾದ್ಯಂತ ಕಂಪ್ಯೂಟರ್ ಗಳಿಗೆ ಹ್ಯಾಕರ್ ಹಾವಳಿ ಶುರುವಾಗಿದೆ. ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಕಂಪ್ಯೂಟರ್ ಗಳ ಮೇಲೆ ವೈರಸ್ ದಾಳಿಯಾಗಿದ್ದು, ಕಾರ್ಯಾಚಾರಣೆ ಸ್ಥಗಿತಗೊಂಡಿದೆ.

 
ಗೋಲ್ಡನ್ ಐ ಎಂಬ ಹೆಸರಿನ ಹೊಸ ರಾನ್ಸಮ್ ವೈರಸ್ ಇದಾಗಿದ್ದು, ಯುರೋಪ್, ರಷ್ಯಾ ಮತ್ತು ಉಕ್ರೇನ್ ನಲ್ಲಿ ತೀವ್ರ ಸಮಸ್ಯೆ ಸೃಷ್ಟಿಸಿದೆ. ಭಾರತದಲ್ಲೂ ಇದರ ಇಫೆಕ್ಟ್ ಕಂಡುಬಂದಿದೆ.

ಆತಂಕಕಾರಿ ಸಂಗತಿಯೆಂದರೆ ಮುಂಬೈನ ನೆಹರೂ ಬಂದರಿನ ಟರ್ಮಿನಲ್ ಗೆ ವೈರಸ್ ದಾಳಿಯಾಗಿದೆ. ವಿದೇಶಗಳ ವಿದ್ಯುತ್ ವಿತರಣಾ ಜಾಲದ ಕಂಪ್ಯೂಟರ್ ಗಳು, ವಿವಿಧ ಕಂಪನಿಗಳ ಕಂಪ್ಯೂಟರ್ ಗಳು ವೈರಸ್ ಗೆ ತುತ್ತಾಗಿದೆ. ಇದನ್ನು ಜಗತ್ತಿನಾದ್ಯಂತ ಹರಡಲು ಹ್ಯಾಕರ್ ಗಳು ಯತ್ನಿಸುತ್ತಿದ್ದಾರೆ. ಹಾಗಾಗಿ ಎಚ್ಚರವಾಗಿರುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ