ಇಸ್ಲಾಮಾಬಾದ್: ಭಾರತದ ಜೊತೆಗೆ ಪಾಕಿಸ್ತಾನ ಸಂಘರ್ಷ ಕೊನೆಗೊಳಿಸಲು ಪ್ರಮುಖ ಕಾರಣವೇನೆಂದು ಈಗ ಒಂದೊಂದಾಗಿ ಬಹಿರಂಗವಾಗುತ್ತಿದೆ. ಪಾಕಿಸ್ತಾನದಲ್ಲಿ ಈಗ ಎಲ್ಲರಿಗೂ ವಾಕರಿಕೆ, ತಲೆನೋವು ಇತ್ಯಾದಿ ಆರೋಗ್ಯ ಸಮಸ್ಯೆಯಾಗುತ್ತಿದೆ. ಇದೆಲ್ಲವೂ ಭಾರತೀಯ ಸೇನೆಯ ದಾಳಿಯ ಇಫೆಕ್ಟ್.
ಇತ್ತೀಚೆಗೆ ಪಾಕಿಸ್ತಾನದ ಸರ್ಗೋದಾ ವಾಯುನೆಲೆ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಬೆಚ್ಚಿಬಿದ್ದ ಪಾಕಿಸ್ತಾನ ಕದನ ವಿರಾಮ ಏರ್ಪಡಿಸಲು ಅಮೆರಿಕಾ ಮೊರೆ ಹೋಗಿತ್ತು. ಭಾರತದ ದಾಳಿಯಿಂದ ಬೆಚ್ಚಿಬಿದ್ದ ಅಮೆರಿಕಾ ಕೂಡಾ ತಕ್ಷಣವೇ ಕದನವಿರಾಮ ಘೋಷಿಸಲು ಭಾರತದ ಮನವೊಲಿಸಿತು ಎನ್ನಲಾಗಿದೆ.
ಇದರ ಹಿಂದೆ ಪ್ರಮುಖ ಕಾರಣವೊಂದಿದೆ. ಸರ್ಗೋದಾ ವಾಯುನೆಲೆ ಸಮೀಪವೇ ಕಿರಾನಾ ಬೆಟ್ಟ ಪ್ರದೇಶವಿದ್ದು ಇಲ್ಲಿಯೇ ಪಾಕಿಸ್ತಾನ, ಅಮೆರಿಕಾ ಸಹಾಯದೊಂದಿಗೆ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ. ಭಾರತ ನಡೆಸಿದ ದಾಳಿಯಲ್ಲಿ ಅಣ್ವಸ್ತ್ರ ನೆಲೆಗೂ ಹಾನಿಯಾಗಿದ್ದು ಇದೇ ಕಾರಣಕ್ಕೆ ಇದೀಗ ವಿಕಿರಣ ಹರಡಲು ಆರಂಭವಾಗಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.
ಹೀಗಾಗಿಯೇ ಈಗ ಪಾಕಿಸ್ತಾನದಲ್ಲಿ ಈ ಭಾಗದ ಜನರಿಗೆ ವಾಕರಿಕೆ, ತಲೆನೋವು, ತಲೆಸುತ್ತುವುದು ಸೇರಿದಂತೆ ವಿಕಿರಣದಿಂದಾಗಿ ಹಲವು ಆರೋಗ್ಯ ಸಮಸ್ಯೆಯುಂಟಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಈ ಭಾಗದ ಜನರನ್ನು ಸ್ಥಳ ಖಾಲಿ ಮಾಡುವಂತೆ ಸೂಚನೆ ನೀಡಲಾಗುತ್ತಿದೆ ಎಂದು ವರದಿಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಪತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಇನ್ನೂ ಪಾಕಿಸ್ತಾನ ಅಧಿಕೃತವಾಗಿ ಖಚಿತಪಡಿಸಿಲ್ಲ.