ವಿವೋದಿಂದ ಇನ್ನೊಂದು ಸ್ಮಾರ್ಟ್‌ಫೋನ್ ರಿಲೀಸ್

ಶನಿವಾರ, 25 ಫೆಬ್ರವರಿ 2017 (07:14 IST)
ಪ್ರಮುಖ ಮೊಬೈಲ್ ತಯಾರಿ ಕಂಪೆನಿ ವಿವೋ ಮತ್ತೊಂದು ಸ್ಮಾರ್ಟ್‌ಫೋನನ್ನು ಹೊರತಂದಿದೆ. ವಿವೋ ವೈ55ಎಸ್ ಹೆಸರಿನ ಈ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಕಂಪೆನಿ ತಿಳಿಸಿದೆ. ಭಾನುವಾರದಿಂದ ಎಲ್ಲಾ ರೀಟೇಲ್ ಮಳಿಗೆಗಳಲ್ಲಿ ಈ ಫೋನ್ ಲಭ್ಯವಾಗಲಿದೆ. ಇದರ ಬೆಲೆ ರೂ.12,490 ಎಂದು ನಿರ್ಧರಿಸಿದೆ.
 
ವಿವೋ ಫೋನ್ ವಿಶೇಷತೆಗಳು
* 5.2 ಇಂಚಿನ ಸ್ಪರ್ಶಸಂವೇದಿ ಪರದೆ
* 3ಜಿಬಿ ರ‍್ಯಾಮ್
* 16 ಜಿಬಿ ಆಂತರಿಕ ಮೆಮೊರಿ
* 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ
* 2730 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ