ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ವಿಚ್ಛೇದನವಾಗುವಾಗ ಪತ್ನಿ ಭಾರೀ ಡಿಮ್ಯಾಂಡ್ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಸುಪ್ರೀಂಕೋರ್ಟ್ ಅಂತಹದ್ದೇ ಬೇಡಿಕೆಯ ಲಿಸ್ಟ್ ಇಟ್ಟ ಪತ್ನಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ.
ಎಂಬಿಎ ಪದವಿ ಪಡೆದ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಈ ವೇಳೆ ಜೀವನಾಂಶವಾಗಿ 12 ಕೋಟಿ ರೂ. ಹಣ, ಮುಂಬೈನಲ್ಲಿ ಒಂದು ಮನೆ, ಬಿಎಂಡಬ್ಲ್ಯು ಕಾರಿಗಾಗಿ ಬೇಡಿಕೆಯಿಟ್ಟಿದ್ದಾಳೆ. ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಬಿಆರ್ ಗವಾಯಿ ಇದನ್ನೆಲ್ಲಾ ನೀವೇ ದುಡಿಯಬಹುದಲ್ವೇ ಎಂದು ಕೇಳಿದ್ದಾರೆ.
ನೀವು ಉನ್ನತ ಶಿಕ್ಷಣ ಪಡೆದಿದ್ದೀರಿ. ನಿಮ್ಮ ವಿದ್ಯಾರ್ಹತೆಗೆ ಬೆಂಗಳೂರು, ಹೈದರಾಬಾದ್ ನಂತಹ ನಗರದಲ್ಲಿ ಒಳ್ಳೆಯ ಕೆಲಸವೇ ಸಿಗುತ್ತದೆ. ಹೀಗಾಗಿ ಇದನ್ನೆಲ್ಲಾ ನೀವೇ ದುಡಿಯಬಹುದು. ಈಗ ಪತಿಯಿಂದ 4 ಕೋಟಿ ರೂ. ಹಣ, ಒಂದು ಮನೆ ಸಿಗುತ್ತದೆ. 18 ತಿಂಗಳ ವಿವಾಹದ ಬಳಿಕ ಬಿಎಂಡಬ್ಲ್ಯು ಕಾರು ಕೂಡಾ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ವಿಚ್ಛೇದನ ಸಂದರ್ಭದಲ್ಲಿ ಪುರುಷರಿಗೆ ಅನ್ಯಾಯವಾಗುತ್ತಿದೆ ಎಂದು ಇತ್ತೀಚೆಗೆ ಆಕ್ರೋಶ ಹೆಚ್ಚಾಗಿದೆ. ಭಾರೀ ಮೊತ್ತದ ಹಣ ಕೊಡಬೇಕಾಗಿ ಬಂದರೆ ಪುರುಷರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದರಿಂದಾಗಿ ಕೆಲವು ಆತ್ಮಹತ್ಯೆ ಪ್ರಕರಣಗಳೂ ನಡೆದಿದ್ದು ಇದೆ. ಈ ನಿಟ್ಟಿನಲ್ಲಿ ನ್ಯಾ. ಬಿಆರ್ ಗವಾಯಿ ಅವರ ಈ ತೀರ್ಪು ಮೆಚ್ಚುಗೆಗೆ ಪಾತ್ರವಾಗಿದೆ.