ವೊಡಾಫೋನ್ 4ಜಿ ಸ್ಮಾರ್ಟ್‌ಫೋನ್‌ ಇದೀಗ ಕೇವಲ 1,590 ರೂ.

lalsab

ಬುಧವಾರ, 20 ಡಿಸೆಂಬರ್ 2017 (14:12 IST)
ವೊಡಾಫೋನ್ ಮತ್ತು ಇಟೆಲ್ ಆರಂಭಿಕ ಹಂತದ 4ಜಿ ಸ್ಮಾರ್ಟ್‌ಫೊನ್‌ ಅನ್ನು ಪ್ರಾರಂಭಿಸಿವೆ, ಇದು A20 ಎಂದು ಕರೆಯಲ್ಪಡುವ ಈ ಫೋನ್ ಇತ್ತೀಚಿನ ತಿಂಗಳುಗಳಲ್ಲಿ ಬಿಡುಗಡೆಯಾದ ಜಿಯೋಫೋನ್, ಏರ್‌ಟೆಎಲ್ ಇಂಟೆಕ್ಸ್ ಆಕ್ವಾ ಲಯನ್ಸ್ ಎನ್ 1 ಮುಂತಾದ ದೂರಸಂಪರ್ಕ ನಿರ್ವಾಹಕರು ಪ್ರಾರಂಭಿಸಿದ ಅನೇಕ ಇತರ ಫೋನ್‌ಗಳಿಗಿಂತ ಭಿನ್ನವಾಗಿದೆ ಮತ್ತು ಕಡಿಮೆ ಬೆಲೆಯನ್ನು ಹೊಂದಿದೆ. 
ಇಟೆಲ್ ಎ20 1GB ರ್ಯಾಮ್‌ ಹಾಗೂ 4-ಇಂಚ್ WVGA ಡಿಸ್‌‌ಪ್ಲೇಯನ್ನು ಆರಂಭಿಕ ಹಂತವಾಗಿ ಒಳಗೊಂಡಿದೆ. ಫೋನ್‌‌ನ ಬೆಲೆಯನ್ನು ರೂ. 3,690 ಗೆ ನಿಗದಿಪಡಿಸಲಾಗಿದೆ ಆದರೆ ವೋಡಾಫೋನ್‌ ರೂ. 2,100 ಅನ್ನು ಗ್ರಾಹಕರಿಗೆ ಕ್ಯಾಶ್‌ಬ್ಯಾಕ್‌ ಆಫರ್‌‌ ನೀಡಲಿದೆ, ಹೀಗಾಗಿ ಈ ಫೋನ್‌ ಗ್ರಾಹಕರಿಗೆ ರೂ. 1,590 ರಲ್ಲಿ ಲಭ್ಯವಾಗಲಿದೆ.
 
ಈ ಆಫರ್‌‌ ಅನ್ನು ಪಡೆದುಕೊಳ್ಳಲು, ಇಟೆಲ್ ಎ20 ಖರೀದಿಸುವ ವೋಡಾಫೋನ್‌‌‌ ಗ್ರಾಹಕರು 36 ತಿಂಗಳು ಅಥವಾ 3 ವರ್ಷಗಳ ಕಾಲ ಪ್ರತಿ ತಿಂಗಳು ರೂ. 150 ಅನ್ನು ರೀಚಾರ್ಜ್‌ ಮಾಡಿಸಬೇಕು. ದೂರಸಂಪರ್ಕ ಸಂಸ್ಥೆ ಹೇಳುವಂತೆ ರೀಚಾರ್ಜ್ ಅನ್ನು ಏಕಕಾಲದಲ್ಲಿ ಅಥವಾ ಒಂದು ಬಾರಿ ರೀಚಾರ್ಜ್ ಆಗಿ ಮಾಡಬಹುದು. ಮೊದಲ 18 ತಿಂಗಳ ನಂತರ, ಗ್ರಾಹಕರು ತಮ್ಮ M-Pesa ವ್ಯಾಲೆಟ್‌ನಲ್ಲಿ ರೂ. 900 ಅನ್ನು ಕ್ಯಾಶ್‌‌‌ಬ್ಯಾಕ್‌ ಆಗಿ ಸ್ವೀಕರಿಸುತ್ತಾರೆ ಹಾಗೂ ಹೆಚ್ಚುವರಿ 18 ತಿಂಗಳ ನಂತರ ರೂ. 1200 ಸ್ವೀಕರಿಸುತ್ತಾರೆ. ಕಂಪನಿಯು ಈ ಆಫರ್‌ ಮಾರ್ಚ್ 31 2018 ವರೆಗೆ ಲಭ್ಯವಿರುತ್ತದೆ ಎಂದು ಹೇಳಿದೆ.
 
ಇಟೆಲ್ ಎ20, ಆಂಡ್ರಾಯ್ಡ್ 7.0 ನೌಗನ್‌ನಲ್ಲಿ ರನ್‌‌‌‌‌‌ ಆಗುತ್ತದೆ ಮತ್ತು 4-ಇಂಚ್‌ WVGA (480x800) ಡಿಸ್‌‌ಪ್ಲೇ ಅನ್ನು ಹೊಂದಿದೆ. ಇದು 1.3GHz ಕ್ವಾಡ್-ಕೋರ್ ಪ್ರೊಸೆಸರ್‌‌, 1ಜಿಬಿ ರ್ಯಾಮ್ ಮತ್ತು 8ಜಿಬಿ ಆಂತರಿಕ ಶೇಖರಣೆ ಸಾಮರ್ಥ್ಯ ಹೊಂದಿದೆ, 32 ಜಿಬಿ ವರೆಗೆ ವಿಸ್ತರಿಸಬಹುದಾದ ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌‌‌ ವೈಶಿಷ್ಟ್ಯವೆಂದರೆ, ಫ್ಲ್ಯಾಶ್‌‌‌‌‌ ಹೊಂದಿರುವ 2 ಮೇಗಾಪಿಕ್ಸೆಲ್‌ನ ಹಿಂಬದಿ ಕ್ಯಾಮರಾ ಹಾಗೂ 0.3 ಮೇಗಾಪಿಕ್ಸೆಲ್‌ನ ಮುಂಬದಿ ಕ್ಯಾಮರಾವನ್ನು ಹೊಂದಿದೆ. ಡ್ಯೂಯಲ್‌ ಸಿಮ್‌‌ ಕಾರ್ಡ್‌ ಸೌಲಭ್ಯ ಹಾಗೂ 1500mAh ಬ್ಯಾಟರಿಯಿಂದ ಕೂಡಿದೆ ಮತ್ತು ಗಾಢ ನೀಲಿ, ಷಾಂಪೇನ್ ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಈ ಫೋನ್‌ ಲಭ್ಯವಿದೆ.
 
ಈ ಸಮಯದಲ್ಲಿ, ನಾವು 4G ಸ್ಮಾರ್ಟ್‌ಫೋನ್ ಅನುಭವವನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ನಮ್ಮ ಎಲ್ಲಾ ಉತ್ಪನ್ನಗಳ ಮೌಲ್ಯಮಾಪನವನ್ನು ಹೆಚ್ಚಿಸಲು ಬದ್ಧರಾಗಿದ್ದೇವೆ. ಈ ಗುರಿಯನ್ನು ಸಾಧಿಸಲು ನಾವು ನಮ್ಮ 4ಜಿ ಪೋಟ್‌ಫೋಲಿಯೊವನ್ನು ಹೆಚ್ಚಿಸುತ್ತಿದ್ದೇವೆ, ಆದರೆ ನಮ್ಮ ಆಫರ್‌‌‌ಗಳಲ್ಲಿ ಹೆಚ್ಚಿನ ಮೌಲ್ಯವನ್ನು ಒದಗಿಸಲು ಪ್ರಮುಖ ಕಾರ್ಯತಂತ್ರದ ಟೈ-ಅಪ್‌ಗಳನ್ನು ಪ್ರವೇಶಿಸುತ್ತಿದ್ದೇವೆ. ವೊಡಾಫೋನ್ ಜೊತೆಗಿನ ನಮ್ಮ ಪಾಲುದಾರಿಕೆಯು ಈ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಉನ್ನತ ನೆಟ್‌ವರ್ಕ್ ಕವರೇಜ್ ಎ20 ಗೆ ವೈಶಿಷ್ಟ್ಯ ತೀವ್ರವಾಗಿ ಕಾರ್ಯ ಮಾಡುತ್ತದೆ. ಇಟೆಲ್ ಮತ್ತು ವೊಡಾಫೋನ್ ಪಾಲುದಾರಿಕೆಯು ಗ್ರಾಹಕರಿಗೆ ಒಟ್ಟಾರೆ ಮೌಲ್ಯವನ್ನು ಒದಗಿಸುವ ಮೂಲಕ ದೇಶದಾದ್ಯಂತ 4ಜಿ ಅಳವಡಿಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಗೌರವ್ ಟಿಕು, ಹಿರಿಯ ವಿ.ಪಿ. ಮಾರ್ಕೆಟಿಂಗ್, ಟ್ರಾನ್ಸ್ಶನ್ ಇಂಡಿಯಾ ಇವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ