ಇನ್‌ಫೋಕಸ್ ವಿಷನ್ 3 ಮೊಬೈಲ್ ಮಾರುಕಟ್ಟೆಗೆ: ಆನ್‌ಲೈನ್‌ನಲ್ಲಿ ಮಾತ್ರ ಮಾರಾಟ

ಗುರುಮೂರ್ತಿ

ಮಂಗಳವಾರ, 19 ಡಿಸೆಂಬರ್ 2017 (18:04 IST)
ಅಮೆರಿಕಾ ಮೂಲದ ಕಂಪನಿಯಾದ ಇನ್‌ಫೋಕಸ್ ಸಂಸ್ಥೆಯು ತನ್ನ ನೂತನ ಮೊಬೈಲಾದ ಇನ್‌ಫೋಕಸ್ ವಿಷನ್ 3 ಅನ್ನು ಪರಿಚಯಿಸಿದ್ದು, ಇದೀಗ ಮೊಬೈಲ್ ಲೋಕದಲ್ಲಿ ಭಾರಿ ನಿರೀಕ್ಷೆಯನ್ನು ಉಂಟುಮಾಡಿದೆ.

ಪ್ರಸ್ತುತ ಇದು ಅಮೇಜಾನ್‌ನಲ್ಲಿ ಡಿಸೆಂಬರ್ 20 ರಿಂದ ಲಭ್ಯವಿದ್ದು, ಈ ಮೊಬೈಲ್ ವಿನ್ಯಾಸ ನೋಡಲು ತುಂಬಾ ಆಕರ್ಷಕವಾಗಿದೆ. ಅಲ್ಲದೇ ಇದರಲ್ಲಿ ಡ್ಯೂಯಲ್‌ಫೈಲ್ ಆಯ್ಕೆಯನ್ನು ನೀಡಲಾಗಿದ್ದು ಒಂದೇ ಬಾರಿಗೆ ಮುಂದಿನ ಮತ್ತು ಹಿಂದಿನ ಕ್ಯಾಮರಾವನ್ನು ಬಳಸಿ ಫೋಟೋವನ್ನು ತೆಗೆಯಬಹುದಾಗಿದೆ. ಮೂಲಗಳ ಪ್ರಕಾರ ಇದರ ಬೆಲೆಯು 6999 ಎಂದು ಹೇಳಲಾಗಿದೆ. 
 
ಇದು 5.7 ಪೂರ್ಣ ಆವೃತ್ತಿ ಸ್ಪರ್ಶ ಪರದೆಯನ್ನು ಹೊಂದಿದ್ದು 18:9 ರ ಅನುಪಾತದಲ್ಲಿ ಉತ್ತಮವಾಗಿ ವೀಡಿಯೊವನ್ನು ವೀಕ್ಷಿಸಬಹುದಾಗಿದೆ. ಇನ್‌ಫೋಕಸ್ ವಿಷನ್ 3 ಮೊಬೈಲ್‌ನಲ್ಲಿ Android 7.0 ನೊಗಟ್‌ ಆಪರೇಟಿಂಗ್ ಸಿಸ್ಟಂ ಬಳಸಲಾಗಿದ್ದು 1.3GHz ಕ್ವಾರ್ಡ್-ಕೋರ್ ಪ್ರೊಸೆಸರ್‌‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದು 2GB RAM ಮತ್ತು 16 GB ಆಂತರಿಂಕ ಮೆಮೊರಿಯನ್ನು ಹೊಂದಿದ್ದು, ಮೆಮೋರಿ ಕಾರ್ಡ್ ಆಯ್ಕೆ ಸಹ ಹೊಂದಿದೆ. ಇದರ ಮೂಲಕ ಮೆಮೊರಿಯನ್ನು 64 GB ವರೆಗೂ ಸಹ ಮೆಮೋರಿಯನ್ನು ವಿಸ್ತರಿಸಬಹುದಾಗಿದೆ. ಇದರ ಕ್ಯಾಮರಾವು ಅದ್ಭುತವಾಗಿದ್ದು ಪ್ರಾಥಮಿಕ ಕ್ಯಾಮರಾವು 13 ಮೆಗಾಫಿಕ್ಸಲ್ ಆಗಿದೆ. ಎರಡನೇ ಕ್ಯಾಮರಾ 8 ಮೆಗಾಫಿಕ್ಸಲ್‌ ಇದ್ದು ಅದರ ಮೂಲಕ ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ತೆಗೆಯಬಹುದಾಗಿದೆ. ಇದರಲ್ಲಿ ಡ್ಯೂಯಲ್ ಸಿಮ್ ಅವಕಾಶವಿದ್ದು ನ್ಯಾನೋ ಸಿಮ್ ಮಾದರಿಯನ್ನು ಹೊಂದಿದೆ.
 
ಇದರಲ್ಲಿ Wi-Fi, GPS, ಬ್ಲೂಟೂತ್, USB OTG, ಎಫ್ಎಮ್, 3G ಮತ್ತು 4G (ಭಾರತದಲ್ಲಿರುವ 4G ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ) ಹಾಗೂ ಪ್ರೊಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್ ಹಾಗೂ ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಹೊಂದಿರುವುದು ವಿಶೇಷವಾಗಿದೆ. ಇದು Android 7.0 ನೊಗಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು  ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಸಹ ಇದು ಹೊಂದಿದೆ. ಇದರಲ್ಲಿ ಹೊರ ತೆಗೆಯಬಹುದಾದ 4000mAh ಬ್ಯಾಟರಿಯಿದ್ದು 22 ದಿನಗಳವರೆಗೆ ಸ್ಟಾಂಡ್ ಬಾಯ್ ಮೋಡ್‌ನಲ್ಲಿ ಇರಲಿದೆ ಎಂದು ಕಂಪನಿ ತಿಳಿಸಿದೆ.
 
ಒಟ್ಟಿನಲ್ಲಿ ಕಡಿಮೆ ದರದಲ್ಲಿ ಸಾಕಷ್ಟು ವಿಶೇಷತೆಗಳು ಮತ್ತು ಉತ್ತಮ ವಿನ್ಯಾಸದೊಂದಿಗೆ ಬರುತ್ತಿರುವ ಇನ್‌ಫೋಕಸ್ ವಿಷನ್ 3 ಮೊಬೈಲ್ ಮಾರುಕಟ್ಟೆಯಲ್ಲಿರುವ ಬ್ರಾಂಡ್ ಮೊಬೈಲ್‌ಗಳಿಗೆ ಟಕ್ಕರ್‌ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ